ಉಪ್ಪುತಿಂದವರು ನೀರು ಕುಡಿಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು : ಕಾಂಗ್ರೆಸ್‌ ವಿರುದ್ದ ಶೋಭಾ ಕಿಡಿ

ಚಿಕ್ಕಮಗಳೂರು : ಕಾಂಗ್ರೆಸ್ ಮುಖಂಡರ ಮನೆ ಮೇಲೆ ಮಾತ್ರ ಐಟಿ ದಾಳಿ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಸಂಸ್ಥೆಗಳು ಅವರವರ ವ್ಯವಹಾರವನ್ನು ನೋಡಿಕೊಂಡು ತೆರಿಗೆ ದಾಳಿಯನ್ನು ಮಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಹಲವೆಡೆ ಕಳೆದ  70 ವರ್ಷಗಳಿಂದ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಮುಖಂಡರೇ ಇದನ್ನು ರಾಜಕೀಯಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

50 ವರ್ಷಗಳಲ್ಲಿ ಅವರೇ ಆಡಳಿತದಲ್ಲಿದ್ದರು. ಅವತ್ತು ನಡೆಸಿದ ದಾಳಿ ರಾಜಕೀಯವಾಗಿತ್ತಾ ಎಂದು ಪ್ರಶ್ನಿಸಿದ್ದಾರೆ.  ಇಂದು ಹಗರಣಗಳನ್ನು ಪತ್ತೆ ಮಾಡೋದಕ್ಕೆ ಹೋದ್ರೆ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತೆ, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಸರ್ಕಾರಕ್ಕೆ ತೆರಿಗೆ ಕಟ್ಟಿ, ಯಾರು ನ್ಯಾಯಯುತವಾಗಿದ್ದಾರೆ ಅವರು ಹೆದರುವ ಅವಶ್ಯಕತೆಯಿಲ್ಲ. ಯಾರಿಗೆ ಭಯ ಇದಿಯೋ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದಿದ್ದಾರೆ.

ನನ್ನ ಬಳಿ ಹಲವು ಡೈರಿ ಇದೆ ಎಂಬ ಡಿಕೆಶಿ ಹೇಳಿಕೆಗೆ ಶೋಭಾ ತಿರುಗೇಟು ನೀಡಿದ್ದು, ಯಾರದ್ದು ಬೇಕಾದ್ರು ಇರಲಿ, ಅವರದ್ದೇ ಸರ್ಕಾರವಿದೆ, ಅವರದ್ದೇ ಮಂತ್ರಿಗಳಿದ್ದಾರೆ. ಅವರ ಸರ್ಕಾರದಲ್ಲೂ ಮಾಡೋದಕ್ಕೆ ಸಾಕಷ್ಟು ಅವಕಾಶವಿದೆ ತನಿಖೆ ಮಾಡಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com