ಬಿಗ್‌ಬಾಸ್‌ ಸೀಸನ್‌ -6 : ಮನೆಯೊಳಗೆ ಎಂಟ್ರಿಕೊಡುವವರ ಹೆಸರು ಬಹಿರಂಗ ?

ಬಿಗ್‌ಬಾಸ್‌ ಸೀಸನ್‌ 5ರಲ್ಲಿ ರ್ಯಾಪರ್‌ ಚಂದನ್ ಶೆಟ್ಟಿ ಗೆದ್ದಿರುವುದು ಎಲ್ಲರಿಗೂ ತಿಳಿದೇ ಇದೆ. ಬಿಗ್‌ಬಾಸ್ ಮುಗಿದು ತಿಂಗಳುಗಳೇ ಕಳೆದರೂ ಅದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಆಗಲೇ ಬಿಗ್‌ಬಾಸ್‌ ಸೀಸನ್‌-6 ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿದೆ. ಅಲ್ಲದೆ ಈ ಬಾರಿ ಬಿಗ್‌ಬಾಸ್‌ಗೆ  ಹೋಗುವವರು ಯಾರು ಎಂಬ ಪ್ರಶ್ನೆಗೆ ಅನೇಕರ ಹೆಸರೂ ಕೇಳಿಬರುತ್ತಿದೆ.

ಈ ಬಾರಿ  ಬಿಗ್‌ಬಾಸ್‌ಗೆ ಹೋಗುವವರ್ಯಾರು ?

ವಿಜಯಲಕ್ಷ್ಮಿ : ಕೆಲ ವರ್ಷಗಳ ಹಿಂದೆ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಹೆಸರು ಮಾಡಿದ್ದ ನಟಿ  ವಿಜಯಲಕ್ಷ್ಮಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಚಂದನ್ ಆಚಾರ್‌ : ಕಿರಿಕ್ ಪಾರ್ಟ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಸ್ನೇಹಿತನ ಪಾತ್ರದಲ್ಲಿ ಮಿಂಚಿ ಬಳಿಕ ಮುಗುಳು ನಗೆ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಬಾರಿ ಚಂದನ್‌ ಬಿಗ್‌ಬಾಸ್‌ ಮನೆಗೆ ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತಿದೆ.

ನಾಗಶೇಖರ್ : ನಿರ್ದೇಶಕ ನಾಗಶೇಖರ್‌ ಸಹ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅನುಮಾನವಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ನೇಹಾ ಶೆಟ್ಟಿ : ಮುಂಗಾರುಮಳೆ 2 ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದ  ನೇಹಾ ಶೆಟ್ಟಿ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಲಿದ್ದಾರಂತೆ.

ಮಂಡ್ಯ ರಮೇಶ್ : ಕಿರುತೆರೆ,ಹಿರಿತೆರೆಯಲ್ಲಿ ಹಾಸ್ಯ ಪ್ರತಿಭೆಯಾಗಿ ಗುರುತಿಸಿಕೊಂಡಿರುವ  ಮಂಡ್ಯ ರಮೇಶ್ ಬಿಗ್‌ಬಾಸ್‌ ಮನೆಗೆ ಹೋಗುತ್ತಿದ್ದಾರಂತೆ. ಕಳೆದ ಸೀಸನ್‌ನಲ್ಲೂ ಅವರು ಮನೆಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಗ್‌ಬಾಸ್‌ಗೆ ಹೋಗಿರಲಿಲ್ಲ. ಆದರೆ ಈ ಬಾರಿ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.

ರಂಜನಿ : ಪುಟ್ಟಗೌರಿ ಖ್ಯಾತಿಯ ನಟಿ ರಂಜಿನಿ ರಾಘವನ್‌ ಈ ಬಾರಿಯ ಬಿಗ್‌ಬಾಸ್‌ಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಚನ್ನಪ್ಪ : ಸರಿಗಮಪ ಶೋ ಮೂಲಕ ಎಲ್ಲರ ಮನಗೆದ್ದಿದ್ದ, ಅಲ್ಲದೆ ಶೋ ನಲ್ಲಿ ಮೊದಲ ಸ್ಥಾನ ಗೆದ್ದಿದ್ದ ಹಾಡುಗಾರ ಚನ್ನಪ್ಪ ಕೂಡ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಲಿದ್ದಾರಂತೆ. ಅಲ್ಲದೆ

ಅನಿರುದ್ಧ್ :  ಕಳೆದ ಬಾರಿಯೂ ಅನಿರುದ್ ಹೆಸರು ಕೇಳಿಬಂದಿತ್ತು. ಆದರೆ ಅವರು ಸ್ಪರ್ಧಿಯಾಗಿ ಹೋಗಿರಲಿಲ್ಲ. ಈ ಬಾರಿಯೂ ಅವರ ಹೆಸರು ಕೇಳಿಬರುತ್ತಿದ್ದು. ಸಂಭಾವ್ಯರ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಲಾಗಿದೆ.

ಈ ಎಲ್ಲಾ ಹೆಸರುಗಳು ಕೇಳಿಬರುತ್ತಿದ್ದರೂ, ಚಾನಲ್‌ನವರು ಅಧಿಕೃತವಾಗಿ ಹೆಸರು ಘೋಷಿಸುವವರೆಗೂ ಕಾಯಲೇಬೇಕಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com