ಬೆಳಗಾವಿಯಲ್ಲಿ ಗೌರಿ ಹತ್ಯೆಯ ಆರೋಪಿ ವಾಗ್ಮೋರೆಗೆ ಎಸ್ಐಟಿಯಿಂದ ಫುಲ್ ಡ್ರಿಲ್…!

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿ ಪರಶುರಾಮ್ ವಾಗ್ಮೋರೆಗೆ ಬೆಳಗಾವಿಯಲ್ಲಿ ಎಸ್ ಐಟಿ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ.

ನಿನ್ನೆ ರಾತ್ರಿಯೆ ಬೆಳಗಾವಿಗೆ ಪರಶುರಾಮ್ ವಾಗ್ಮೋರೆ ಕರೆತಂದ ಅಧಿಕಾರಿಗಳು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದರು. ನಗರದ ರಹಸ್ಯ ಸ್ಥಳದಲ್ಲಿ ವಾಗ್ಮೋರೆಯನ್ನು ಇರಿಸಲಾಗಿತ್ತು. ಬೆಳಗ್ಗೆಯಿಂದಲೇ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಪ್ರಮುಖವಾಗಿ ಗೌರಿ ಹತ್ಯೆ ವೇಳೆಯಲ್ಲಿ ವಾಗ್ಮೋರೆ ಬೆಳಗಾವಿಯಲ್ಲಿಯೇ ಬಂದೂಕು ತರಬೇತಿ ಪಡೆದಿರೋ ಬಗ್ಗೆ ಮಾಹಿತಿ ಇತ್ತು. ಖಾನಾಪುರ ಕಾಡಿನಲ್ಲಿ ಈ ಬಂದೂಕು ತರಬೇತಿ ನಡೆದಿತ್ತು. ಅಲ್ಲಿಗೆ ಪರಶುರಾಮ್ ವಾಗ್ಮೋರೆಯನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇನ್ನು ವಾಗ್ಮೋರೆ ಸಹಕಾರ ನೀಡಿದ ಹಲವರನ್ನು ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರೋ ಸಾಧ್ಯತೆ ಇದೆ.  ಎಸ್ ಐ ಟಿ ಅಧಿಕಾರಿಗಳು ರಹಸ್ಯವಾಗಿ ಗೌರಿ ಲಂಕೇಶ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಮಾಹಿತಿಯನ್ನು ಸ್ಥಳೀಯ ಪೊಲೀಸರು ಅಧಿಕಾರಿಗಳಿಗೆ ನೀಡಿಲ್ಲ. ಆರೋಪಿ ವಾಗ್ಮೋರೆಗೆ ಬೆಳಗಾವಿ ಖಾನಾಪುರ, ಚಾಮರಾಜನಗರದಲ್ಲಿ ಬಂದೂಕು ತರಬೇತಿ ನೀಡಲಾಗಿತ್ತು ಎನ್ನೋ ಮಾಹಿತಿ ತಿಳಿದಿದೆ. ಇನ್ನೂ ಬೆಳಗಾವಿಯಿಂದ ಹುಬ್ಬಳ್ಳಿಗೆ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಎಸ್ ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೇ ಹುಬ್ಬಳ್ಳಿಗು ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ಏನು ಸಂಬಂಧ ಎಂಬುದು ಮಾತ್ರ ನಿಗೂಢವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com