ಬಿಜೆಪಿ ನಾಯಕರ ಆಟಕ್ಕೆಲ್ಲ ನಾವು ಜಗ್ಗಲ್ಲ : ಡಿಕೆಶಿ ಬೆನ್ನಿಗೆ ನಿಂತ ದಿನೇಶ್ ಗುಂಡೂರಾವ್

ಬೆಂಗಳೂರು : ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿರುವ ಸಚಿವ ಡಿ.ಕೆ ಶಿವಕುಮಾರ್‌ಗೆ ಕಾಂಗ್ರೆಸ್‌ನ ಒಬ್ಬೊಬ್ಬರೇ ನಾಯಕರು ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ.

ಇಂದು ಸಹ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಡಿಕೆಶಿ ಪರ ಬ್ಯಾಟ್ ಮಾಡಿದ್ದು, ಐಟಿಯವರು ಮಾಡುವ ಕೆಲಸವನ್ನು ಮಾಡಲಿ. ಅ ವರ ಉದ್ದೇಶ ಏನು ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನ ಮುಖಂಡರನ್ನು ಹುಡುಕಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಆದರೆ ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಗುಂಡೂರಾವ್‌, ಬಿಜೆಪಿಯಲ್ಲಿ ಭ್ರಷ್ಟರಿಲ್ಲ, ಬೇರೆ ಪಕ್ಷಗಳಲ್ಲಿರುವವರೆಲ್ಲ ಭ್ರಷ್ಟರೇ ಎಂಬಂತೆ ಬಿಂಬಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ. ಆದರೆ ಅವರು ಹೇಳಿಕೆ ನೀಡಿದ್ದೆಲ್ಲ ಸತ್ಯ ಆಗಲ್ಲ. ಅವರ ಪ್ರಯತ್ನ ಫಲಿಸಲ್ಲ. ಕಾನೂನಾತ್ಮಕವಾಗಿ ಡಿಕೆಶಿ ಹೋರಾಟ ಮಾಡುತ್ತಾರೆ. ಕಾಂಗ್ರೆಸ್‌ನ ಎಲ್ಲಾ ನಾಯಕರು ಡಿಕೆಶಿ ಪರ ಇರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com