ಬಾಗಲಕೋಟೆ : ಯೋಗ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಪ್ರಾಣಬಿಟ್ಟ ಶಿಕ್ಷಕ !!

50 ವರ್ಷದ  ವಿಶ್ವನಾಥ್  ಬಿರಾದಾರ ಮೃತ ಶಿಕ್ಷಕ ಎಂದು ತಿಳಿದುಬಂದಿದ್ದು, ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮರಣ ಹೊಂದಿದ್ದಾರೆ.
 
ಬಾಗಲಕೋಟೆಯ ತೇರದಾಳ ಪಟ್ಟಣದ ಜೆವಿ ಮಂಡಳ ಸಂಸ್ಥೆಯ ಗುರುಕುಲ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಭಾಗವಹಿಸಿದ್ದರು. ಹೃದಯಾಘಾತಕ್ಕೆ ಒಳಗಾದ ಶಿಕ್ಷಕ ವಿಶ್ವನಾಥ್‌ ಎಸ್.ಜೆ. ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಶ್ವನಾಥ್‌ ಅವರು ಮೊದಲಿಂದಲೂ ಯೋಗ ಅಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com