ಚಿತ್ರದುರ್ಗ : ಆಟೋ-ಟಾಟಾ ಮ್ಯಾಜಿಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆ ಸಾವು

ಭರಮಸಾಗರ ಬಳಿ ಆಟೋ-ಟಾಟಾ ಮ್ಯಾಜೀಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸಮೀಪದ ಬಿಳಿಚೋಡು ರಸ್ತೆಯಲ್ಲಿ ಘಟನೆ ನಡೆದಿದೆ.

55 ವರ್ಷದ ಶಾರದಮ್ಮ ಮೃತ ದುರ್ದೈವಿಯಾಗಿದ್ದಾರೆ. ಕಾಕಬಾಳು ಗ್ರಾಮದಿಂದ ಸಂತೆಗೆ ಬರುತ್ತಿದ್ದ ಆಟೋ ಭರಮಸಾಗರದಿಂದ ಹೋಗುತ್ತಿದ್ದ ಟಾಟಾ ಮ್ಯಾಜೀಕ್ ನಡುವೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿ ರಭರಸಕ್ಕೆ ತರಕಾರಿಗಳು ಚಲ್ಲಾಪಿಲ್ಲಿಯಾಗಿವೆ. ಗಾಯಾಳುಗಳನ್ನ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ. ಆಟೋ ಚಾಲಕ ಮಾರುತಿ, ಮಲ್ಲಿಕಾಮೂರ್ತಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….

Leave a Reply

Your email address will not be published.

Social Media Auto Publish Powered By : XYZScripts.com