ಸುರಿಯೋ ಮಳೆ ಮಧ್ಯೆಯೇ ಕೆಳಗಿಳಿಯುವಂತೆ ಒತ್ತಾಯ : ಏರ್ ಏಷ್ಯಾ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ

ಮುಂಬೈ : ಕೋಲ್ಕತ್ತಾದಿಂದ ಬಾಗ್ದೋಗ್ರಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ  ವಿರುದ್ದ ಅನುಚಿತ ವರ್ತನೆಯ ಆರೋಪ ಕೇಳಿಬಂದಿದೆ.

ವಿಮಾನ 4 ಗಂಟೆ ವಿಳಂಬವಾಗಿದ್ದಲ್ಲದೆ, ಸರಿಯಾದ ಸಮಯಕ್ಕೆ ಆಹಾರ, ನೀರು ನೀಡದೆ ಸತಾಯಿಸಿದ್ದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರಯಾಣಿಕರೊಬ್ಬರು ಹೇಳಿಕೆ ನೀಡಿದ್ದು, ವಿಮಾನ 4 ಗಂಟೆ ತಡವಾಗಿ ಹೊರಟಿತ್ತು. ತಮ್ಮ ತಮ್ಮ ಸ್ಥಾನದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗಿಳಿಯಲು ಸೂಚಿಸಿದರು. ಆದರೆ ಯಾರೂ ಹೊರಹೋಗಲು ಒಪ್ಪಲಿಲ್ಲ. ಹೊರಗೆ ಮಳೆ ಸುರಿಯುತ್ತಿದ್ದರೂ ಪೈಲೆಟ್‌ ಎಸಿಯನ್ನು ಜಾಸ್ತಿ ಮಾಡಿದ್ದರು. ಈ ವೇಳೆ ವಿಮಾನದ ತುಂಬ ಮಂಜಿನ ವಾತಾವರಣ ನಿರ್ಮಾಣವಾಗಿ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮಕ್ಕಳು ಹೆದರಿದ್ದು, ಕೆಲವರು ವಾಂತಿ ಮಾಡಿಕೊಂಡರು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಏರ್​ ಏಷ್ಯಾ ವಿಮಾನದಲ್ಲಿ ನಡೆದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವೇಳೆ ಪ್ರಯಾಣಿಕರು ಮತ್ತು ಏರ್​ ಏಷ್ಯಾ ಸಿಬ್ಬಂದಿಯ ನಡುವೆ ವಾಗ್ವಾದ ನಡೆದಿದ್ದು, ಬೇಕೆಂದೇ ಪೈಲಟ್​ ಎಸಿಯನ್ನು ಹೆಚ್ಚಿಸಿ ಉಸಿರಾಡಲೂ ಆಗದಂತೆ ಮಾಡಿ ಕೆಳಗಿಳಿಸಲು ಪ್ರಯತ್ನಿಸಿದ್ದಾನೆ ಎಂದು ಪ್ರಯಾಣಿಕರು ಗಂಭೀರ ಆರೋಪ ಮಾಡಿದ್ದಾರೆ.

Leave a Reply

Your email address will not be published.