ವಾರ್ಡನ್‌, ಕಾಲೇಜು ಆಡಳಿತ ಮಂಡಳಿ ಕಿರುಕುಳ : ಹಾಸ್ಟೆಲ್ ರೂಮಿನಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

ತುಮಕೂರು : ಪ್ರಥಮ ವರ್ಷದ ನರ್ಸಿಂಗ್ ವಿಧ್ಯಾರ್ಥಿನಿಯೋರ್ವಳು ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ವರದರಾಜ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಅರ್ಚನಾ (21)ಮೃತ ವಿದ್ಯಾರ್ಥಿನಿ.

ನಿನ್ನೆ ಊರಿನಿಂದ ಕಾಲೇಜಿಗೆ ಬಂದಿದ್ದ ಅರ್ಚನಾ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾಸ್ಟೆಲ್ ವಾರ್ಡನ್ ಹಾಗೂ ಆಡಳಿತ ಮಂಡಳಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಮುಂಚೆ ಕಾಲೇಜು ಶುಲ್ಕದ ವಿಳಂಬದ ಕುರಿತಾಗಿ ಪದೇ ಪದೇ ವಿದ್ಯಾರ್ಥಿನಿಯ ಪೋಷಕರಿಗೆ ಕರೆ ಮಾಡಿ ಒತ್ತಾಯ ಮಾಡುತ್ತಿದ್ದರು.
ನಾವು ಬಡವರು ಹಾಗಾಗಿ ಸ್ವಲ್ಪ ದಿನ ಬಿಟ್ಟು ಫೀಸ್ ಕಟ್ಟೋದಾಗಿ ತಿಳಿಸಿದ್ದೆವು. ಆದರೆ ಇಂದು ಇದ್ದಕ್ಕಿದ್ದಂತೆ ಈ ದುರ್ಘಟನೆ ನಡೆದಿದೆ‌, ನಮ್ಮ ಮಗಳ ಸಾವಿಗೆ ನ್ಯಾಯ ಬೇಕು ಹಾಗಾಗಿ ಕಾಲೇಜು ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವುದಾಗಿ ಮೃತಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com