ಶೋಭಾ ಕರಂದ್ಲಾಜೆ ಮನೆಲಿ ಯಡಿಯೂರಪ್ಪನವರ ಹಣ ಸಿಗುತ್ತೆ, ಬೇಕಾದ್ರೆ ನೋಡಿ : ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಕಾಗೋಡು ತಿಮ್ಮಪ್ಪನವರು ಸೋತಿರುವುದು ಬಹಳ ನೋವಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನನಗೆ ಮೋಸ ಮಾಡಿದ ಬಿಎಸ್ ವೈ ಗೆ ರಾಜ್ಯದ ಜನ ಸಹ ಮೋಸ ಮಾಡಿದ್ದಾರೆ. ಇದರಿಂದ ನನ್ನ ಹರಕೆ ಈಡೇರಿದೆ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮನೆ ದೇವರು ಹುಚ್ಚರಾಯನಲ್ಲಿ ಹರಕೆ ಹೂತ್ತಿದ್ದೆ. ಬಿಎಸ್ ವೈ ಮಕಾಡೆ ಮಲಗಿದ್ದಾರೆ. ಅವರ ಶಕ್ತಿ ಕುಂದಿದೆ. ಮೋದಿ ಬಾರದೆ ಹೋಗಿದ್ರೆ ಬಿಜೆಪಿ 70 ಸೀಟು ದಾಟುತ್ತಿರಲಿಲ್ಲ.  ಭ್ರಷ್ಟಚಾರ ಮಾಡಿ ಜೈಲಿಗೆ ಹೋದ ಸಿಎಂ ಯಡಿಯೂರಪ್ಪನಂತಹವರನ್ನ ಜನ ಒಪ್ಪುವುದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದು ಸರಿಯಾಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಅಪವಿತ್ರ ಮೈತ್ರಿ ಎಂದು ಹೇಳುತ್ತಿರುವವರೆ ಹಿಂದೆ ಜೆಡಿಎಸ್ ಕಾಲಿಗೆ ಬಿದ‌್ದು ಸರ್ಕಾರ ಮಾಡಿದ್ದು ಮರೆತಂತೆ ಇದೆ. ಬಿಎಸ್ ವೈ ಹತಾಷೆಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸಾಲ ಮನ್ನಾದಲ್ಲಿ ಎರಡು ಪಕ್ಷಗಳ ನಾಯಕರನ್ನು ಸೇರಿ ಮಾತನಾಡಿ ಸಾಲ ಮನ್ನಾ ಮಾಡಬೇಕು ಎಂದು ಸರಿಯಾಗಿಯೇ ಹೇಳಿದ್ದಾರೆ.ಸಾಲ ಮನ್ನಾ ಮಾಡುವ ಭರವಸೆ ನಮಗೆ ಇದೆ. ಯಡಿಯೂರಪ್ಪ ಸೀಟನ್ನು ಹಣಕ್ಕೆ ಮಾರಿದ್ದಾರೆ. ಈ ಹಣವನ್ನು ಶಿವಮೊಗ್ಗದಲ್ಲಿ ಹಂಚಿದ್ದಾರೆ. ಟಿಕೇಟ್ ಹಣದಿಂದಲೇ ಚುನಾವಣೆಯಲ್ಲಿ ಗೆದ್ದಿದ‌್ದಾರೆ. ಸಿಗಂದೂರು ದೇವಿಯ ಪೋಟೊ ತೋರ್ಸಿ  ಗೆದ್ದಿದ್ದಾರೆ.ಐಟಿ ರೇಡ್ ಬೇರೆ ಕಡೆ ಮಾಡುವ ಬದಲು ಶೋಭ ಕರದ್ಲಾಂಜೆ ಮನೆ ಮೇಲೆ ದಾಳಿ ಮಾಡಿದ್ರೆ, ಯಡಿಯೂರಪ್ಪನವರ ಹಣ ಸಿಗುತ್ತದೆ ಎಂದಿದ್ದಾರೆ.

ಬಿಜೆಪಿಯ ಪರವಾಗಿ ಶಿವಮೊಗ್ಗ ಬ್ರಾಹ್ಮಣರು ನಿಂತರೂ ಬಿಜೆಪಿಯವರು ಭಾನು ಪ್ರಕಾಶ್ ರವರಿಗೆ ವಿಧಾನ ಪರಿಷತ್ ಸ್ಥಾನ ನೀಡಿಲ್ಲ. ಇದರಿಂದ ಬಿಜೆಪಿಯವರು ಬ್ರಾಹ್ಮಣರಿಗೆ ಮೋಸ ಮಾಡಿದ‌್ದಾರೆ. ಬಿಜೆಪಿಯಲ್ಲಿ ಎಲ್ಲಾ ಸ್ಥಾನವನ್ನು ಲಿಂಗಾಯತರಿಗೆ ನೀಡಿದ್ದು ಸರಿಯಲ್ಲ. ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್ ಡಿ ಕೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗಬೇಕು ಎಂದು ಹೇಳುವ ಬಿಎಸ್ ವೈ ಗೆ ತಲೆ ಕೆಟ್ಟಿದೆ ಎಂದಿದ್ದಾರೆ.

ಮೂರು ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ‌್ದಾರೆ, ಯಡಿಯೂರಪ್ಪನವರೆ ಕಲಿಸಿದ ಆಪರೇಷನನ್ನೆ ನಾನು ಮಾಡುತ್ತೆನೆ. ಅಧಿಕಾರ ಎಂಬ ದ್ರಾಕ್ಷಿ ತಿನ್ನಲು ಯಡಿಯೂರಪ್ಪ ನರಿ ರೀತಿ ಕಾಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Leave a Reply

Your email address will not be published.