ದೋಸ್ತಿ ಸರ್ಕಾರ ಕೆಡವೋ ಪ್ರಯತ್ನ ಮಾಡಿದರೆ ಆಪರೇಷನ್‌ ಹಸ್ತ ಗ್ಯಾರೆಂಟಿ : ಹೊಸ ಬಾಂಬ್ ಸಿಡಿಸಿದ ಬೇಳೂರು

ಶಿವಮೊಗ್ಗ : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದನ್ನು ಕೆಡವಲು ಬಿಜೆಪಿ ಯತ್ನಿಸಿದರೆ ಆಪರೇಷನ್ ಹಸ್ತ ಗ್ಯಾರಂಟಿ. ಪಕ್ಷದ ಜೊತೆಗೆ ಈಗಾಗಲೇ ಬಿಜೆಪಿಯ 7-8 ಜನ ಶಾಸಕರು ಸಂಪರ್ಕದಲ್ಲಿದ್ದಾರೆ. ನನ್ನ ಬಳಿಯೇ 3 ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಪಕ್ಷ ಅಧಿಕಾರದ ಕ‌ನಸು ಕಾಣುತ್ತಿದೆ. ಕಾಂಗ್ರೆಸ್ ನನಗೆ ಏನಾದರೂ ಆಪರೇಷನ್ ಹಸ್ತ ನಡೆಸಲು ಅವಕಾಶ ಕೊಟ್ಟರೆ ಬಿಜೆಪಿಯ 7-8 ಜನ ಶಾಸಕರನ್ನು ಕರೆ ತರುತ್ತೇನೆ. ಇದು ಗ್ಯಾರೆಂಟಿ ಎಂದಿದ್ದಾರೆ.ಈಗಾಗಲೆ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಸ್ವಲ್ಪ ದಿನ ಕಾಯಿರಿ. ಬಿಜೆಪಿಗೆ ಹೋದ ಅಷ್ಟು ಜನ ಕಾಂಗ್ರೆಸಿಗರು ಮತ್ತೆ ಮರಳಿ ತಮ್ಮ ಪಕ್ಷಕ್ಕೆ ಮರಳುವಂತೆ ಮಾಡುವುದಾಗಿ ಹೇಳಿದ್ದಾರೆ.
ನಾನು ಬಂಗಾರಪ್ಪ ಹಾಗೂ ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದವನು. ಈ ಹಿಂದೆ ಆಪರೇಷನ್ ಕಮಲ ನಡೆಸುವಾಗ ಆ ಪಕ್ಷದಲ್ಲಿಯೇ ಇದ್ದೆ. ಹಾಗಾಗಿ ಆಪರೇಷನ್ ನಡೆಸುವ‌ ಕಲೆಯನ್ನ ಬಿಎಸ್ ವೈ ಕಲಿಸಿ ತೋರಿಸಿಕೊಟ್ಟಿದ್ದಾರೆ. ಅದನ್ನ ಅವರಿಗೆ ತಿರುಗುಬಾಣವಾಗಿಸುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com