ಶಸ್ತಾಸ್ತ್ರ ಪರವಾನಗಿ ಅರ್ಜಿ ಸಲ್ಲಿಸಿದ ಸಾಕ್ಷಿ ಧೋನಿ : MSD ಪತ್ನಿಗೆ ಜೀವ ಬೆದರಿಕೆ..?

ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಶಸ್ತ್ರಾಸ್ತ್ರ ಪರವಾನಗಿಯನ್ನು ಕೋರಿದ್ದಾರೆ. ಸಾಕ್ಷಿ ಧೋನಿ, ಪಿಸ್ಟಲ್ ಅಥವಾ .32 ರಿವಾಲ್ವರ್ ಹೊಂದಲು ಪರವಾನಗಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

Image result for sakshi dhoni arms license

ಶಸ್ತ್ರಾಸ್ತ್ರ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಸಾಕ್ಷಿ ಕಾರಣವನ್ನು ವಿವರಿಸಿದ್ದಾರೆ. ‘ರಾಂಚಿಯಲ್ಲಿರುವ ಮನೆಯಲ್ಲಿ ಬಹಳ ಹೊತ್ತು ಸಾಕ್ಷಿ ಒಬ್ಬರೇ ಇರುವುದಾಗಿಯೂ, ವೈಯಕ್ತಿಕ ಕೆಲಸಗಳಿಗಾಗಿ ಎಷ್ಟೋ ಸಲ ಒಬ್ಬಳೇ ಹೊರಗಡೆ ಹೋಗುವ ಸಂದರ್ಭವಿರುತ್ತದೆ. ಇಂತಹ ವೇಳೆಯಲ್ಲಿ ತಮ್ಮ ಪ್ರಾಣಕ್ಕೆ ಅಪಾಯವಿದ್ದು, ಸುರಕ್ಷತೆಗಾಗಿ ಶಸ್ತ್ರವೊಂದನ್ನು ಹೊಂದಲು ಬಯಸಿರುವುದಾಗಿ ತಿಳಿಸಿದ್ದಾರೆ.

ಮಾಜಿ ನಾಯಕ ಮಹೇದ್ರ ಸಿಂಗ್ ಧೋನಿ 2008ರಲ್ಲಿ 9 ಎಮ್ ಎಮ್ ಗನ್ ಗಾಗಿ ಪರವಾನಗಿ ಕೋರಿದ್ದರು. ಆದರೆ ಕೇಂದ್ರ ಗೃಹ ಸಚಿವಾಲಯದಿಂದ ಅರ್ಜಿಯನ್ನು ನಿರಾಕರಿಸಲಾಗಿತ್ತು. 2010ರಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗಿ ಧೋನಿ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com