“ಅಯೋಗ್ಯ”ನ ವಿರುದ್ಧ ಸಿಡಿದೆದ್ದ ಗ್ರಾಮ ಪಂಚಾಯ್ತಿ ಸದಸ್ಯರು : ಕಾರಣವೇನು ?

ಕ್ವಾಟ್ಲೆ ಸತೀಶ ನಾಯಕನಟನಾಗಿ ನಟಿಸಿರುವ “ಅಯೋಗ್ಯ ಗ್ರಾಮಪಂಚಾಯ್ತಿ ಸದಸ್ಯ ” ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಚಿತ್ರದ ಹೆಸರನ್ನು ಬದಲಿಸುವಂತೆ ಕನ್ನಡಪರ ಸಂಘಟನೆಯೊಂದು ಹೋರಾಟಕ್ಕೆ ಸಜ್ಜಾಗಿದೆ. ಹೆಸರು ಬದಲಿಸದಿದ್ದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂಬ ಎಚ್ಚರಿಕೆ ನೀಡಿದೆ.

ನಾಯಕನಾಗಿ ಕ್ವಾಟ್ಲೆ ಸತೀಶ ಹಾಗೂ ನಾಯಕಿಯಾಗಿ ರಚಿತಾ ರಾಮ್ ನಟಿಸಿರುವ “ಅಯೋಗ್ಯ ಗ್ರಾಮ ಪಂಚಾಯ್ತಿ ಸದಸ್ಯ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ದವಾಗುತ್ತಿದೆ.ಆದ್ರೆ ಚಿತ್ರದ ಟೈಟಲ್ ಜನಪ್ರತಿನಿಧಿಗಳನ್ನ ಅಗೌರವಿಸುವ ರೀತಿ ಇದೆ ಎಂದು ಆರೋಪಿಸಿರುವ ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯ ತೀವ್ರ ಘಟಕದ ಅಧ್ಯಕ್ಷರಾದ ತೇಜಸ್ವಿಕುಮಾರ್ ಹಾಗೂ ಮೈಸೂರು ಶ್ರೀರಾಂಪುರ ಗ್ರಾಮಪಂಚಾಯ್ತಿ ಸದಸ್ಯರಾದ ಚಂದ್ರಶೇಖರ್ ರವರು ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದ್ದಲ್ಲದೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿತ್ರದ ಟೈಟಲ್ ಪಡೆದಿರುವುದು “ಅಯೋಗ್ಯ ” ಎಂಬ ಹೆಸರಲ್ಲಿ. ಆದ್ರೆ ಬಿಡುಗಡೆಗೆ ಸಿದ್ದವಾಗಿರೋದು “ಅಯೋಗ್ಯ ಗ್ರಾಮಪಂಚಾಯ್ತಿ ಸದಸ್ಯ” ಎಂಬ ಹೆಸರಿನಲ್ಲಿ. ಚಲನಚಿತ್ರ ವಾಣಿಜ್ಯ ಮಂಡಳಿಯೂ ಸಹ ಟೈಟಲ್ ಕೊಟ್ಟಿರೋದು ಕೇವಲ “ಅಯೋಗ್ಯ ” ಎಂಬ ಹೆಸರಿಗೆ ಮಾತ್ರವೆಂದು ಸ್ಪಷ್ಟನೆ ನೀಡಿದೆ. ಹೀಗಿದ್ದೂ ನಿರ್ಮಾಪಕ ಚಂದ್ರಶೇಖರ್ ಮೂಲ ಹೆಸರಿಗೆ ಗ್ರಾಮಪಂಚಾಯ್ತಿ ಸದಸ್ಯ ಎಂದು ಸೇರಿಸಿ ಜನಪ್ರತಿನಿಧಿಗಳನ್ನ ಅಗೌರವಿಸಿದ್ದಾರೆಂದು ಆರೋಪಿಸಿರುವ ಗ್ರಾಮಪಂಚಾಯ್ತಿ ಸದಸ್ಯರಾದ ಚಂದ್ರಶೇಖರ್ ಚಿತ್ರದ ಹೆಸರನ್ನ ಬದಲಿಸುವಂತೆ ಹೋರಾಟಕ್ಕೆ ಇಳಿದಿದ್ದಾರೆ. ಹಾಗೊಮ್ಮೆ ತಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.