ಕುಟುಂಬ ಸಮೇತ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಮೈಸೂರಿನ ಮಹಾರಾಜ ಯದುವೀರ್‌

ಮೈಸೂರು : ನಾಡ ದೇವತೆ ಚಾಮುಂಡೇಶ್ವರಿಗೆ ಇಂದು ಮೈಸೂರಿನ ಮಹಾರಾಜ ಯದುವೀರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಂಪ್ರದಾಯದಂತೆ ವಾಲಗ ಸಮೇತರಾಗಿ ಮಹಾರಾಜ ಯದುವೀರ್‌, ಪತ್ನಿ ತ್ರಿಷಿಕಾ, ಪುತ್ರ ಆದ್ಯವೀರ್‌ರನ್ನು ದೇಗುಲದ ಅರ್ಚಕರು ಬರಮಾಡಿಕೊಂಡಿದ್ದು, ಯದುವೀರ್ ದಂಪತಿಗೆ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಪೂಜೆ ಬಗ್ಗೆ ಮಾರ್ಗದರ್ಶನ ನೀಡಿದರು.
ಪೂಜೆಗೆ ಬಂದಿದ್ದ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾರಿನಲ್ಲಿ ಕೂತಿದ್ದ ವೇಳೆ ಜನರ  ಸೆಲ್ಫಿಗೆ ಯದುವೀರ್ ಪೋಸ್‌ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com