ವಿದೇಶಿ ಪ್ರವಾಸ ಆಯ್ತು…ಮೋದಿ ಇನ್ನು ಅನ್ಯಗ್ರಹದ ಪ್ರವಾಸ ಶುರು ಮಾಡ್ತಾರೆ : ಶಿವಸೇನೆ ವ್ಯಂಗ್ಯ

ಮುಂಬೈ : ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸದ ಕುರಿತು ಶಿವಸೇನೆ  ವ್ಯಂಗ್ಯವಾಡಿದ್ದು, ಮೋದಿ ಎಲ್ಲಾ ದೇಶಗಳ ಪ್ರವಾಸ ಮಾಡಿದ್ದಾಯಿತು. ಇನ್ನು ಅನ್ಯಗ್ರಹದ ಪ್ರವಾಸ ಪ್ರಾರಂಭ ಮಾಡುತ್ತಾರೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮೊದಲಿನಿಂದಲೂ ಪ್ರಧಾನಿ ಮೋದಿ ಅವರ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಾ ಬಂದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಇಂದು ನಡೆದ 52ನೇ ಸಂಸ್ಥಾಪನಾ ದಿನದಂದು ಮೋದಿ ವಿರುದ್ದ ಕಿಡಿಕಾರಿದ್ದಾರೆ. ಮೋದಿ ಕೇವಲ ಸುಳ್ಳು ಭರವೆಸಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದರು. ಅದನ್ನ ಮುಂದುವರಿಸಿದ್ದಾರೆ. ಆದರೆ ಈ ಬಾರಿ ಹಿಂದಿನಂತೆ ನಡೆಯುವುದಿಲ್ಲ ಎಂದಿದ್ದಾರೆ.

ಇದೇ ವೇಳೆ, ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರದ ಮುರಿದು ಬಿದ್ದ ಬಗ್ಗೆ ಮಾತನಾಡಿದ ಅವರು, 600 ಸೈನಿಕರನ್ನು ಬಲಿಕೊಟ್ಟ ಮೇಲೆ ಮೈತ್ರಿ ಸರ್ಕಾರ ಅಪ್ರಯೋಜಕ ಎಂದು ಅವರಿಗೆ ತಿಳಿಯಿತಾ ಎಂದು ಪ್ರಶ್ನೆ ಮಾಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com