ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದೇ ತಪ್ಪಾಯ್ತು : ಊರಿಗೆ ಬಂದ ಹಿಂದೂ ಯುವಕನಿಗೆ ಆಗಿದ್ದೇನು ?

ಕಲಬುರ್ಗಿ : ಅಂತರ್ಜಾತಿ ವಿವಾಹವಾದ ಹಿನ್ನಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ.

ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಅಸ್ವಸ್ಥ ಯುವಕನಿಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಾಡಲಾಗುತ್ತಿದೆ. ಗಾಯಗೊಂಡ ಯುವಕನನ್ನು ಮಂಜುನಾಥ ಗಾಯಕವಾಡ ಎಂದು ಹೆಸರಿಸಲಾಗಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಮಂಜುನಾಥ ಗಾಯಕವಾಡ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ.  ಇಂದು ತನ್ನ ವ್ಯಯಕ್ತಿಕ ಕೆಲಸದ ನಿಮಿತ್ತ ತಮ್ಮೂರಾದ ಜೇವರ್ಗಿ ಪಟ್ಟಣಕ್ಕೆ ಹೋಗಿದ್ದ ವೇಳೆ ಮಂಜುನಾಥ್ ಪತ್ನಿಯ ಸಹೋದರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಅಂತರ್ಜಾತಿ ವಿವಾದ ಹಿನ್ನಲೆ ಒಂದೂವರೆ ವರ್ಷದ ಹಿಂದಿನಿಂದಲೂ ಮಂಜುನಾಥನ ಸಹೋದರರು ಕಾಲು ಕೆದರಿಕೊಂಡು ಜಗಳ ತೆಗೆಯುತ್ತಿದ್ದರು ಎನ್ನಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.