Cricket : ಬಾಲ್ ಟ್ಯಾಂಪರಿಂಗ್ ಪ್ರಕರಣ : ಚಂಡಿಮಲ್‍ಗೆ 1 ಟೆಸ್ಟ್ ಪಂದ್ಯ ನಿಷೇಧ

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಲ್ ಗೆ ಒಂದು ವರ್ಷ ನಿಷೇಧ ಹೇರಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಬ್ರಿಡ್ಜ್ ಟೌನ್ ನಲ್ಲಿ ಶನಿವಾರದಿಂದ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡದಂತೆ ಐಸಿಸಿ ನಿಷೇಧ ಹೇರಿದೆ.

Related image

ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಈ ಪಂದ್ಯದಲ್ಲಿ ಚಂಡಿಮಲ್ ಸಿಹಿ ಪದಾರ್ಥವನ್ನು ತಿಂದು ಲಾಲಾರಸವನ್ನು ಚೆಂಡಿನ ಮೇಲೆ ಸವರಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಐಸಿಸಿ ಆರೋಪಿಸಿತ್ತು.

‘ ದಿನೇಶ್ ಚಂಡಿಮಲ್, ಕೃತಕ ಪದಾರ್ಥವನ್ನು ಚೆಂಡಿನ ಮೇಲೆ ಸವರಿರುವುದು ಪಂದ್ಯದ ವಿಡಿಯೋ ಫುಟೇಜ್ ಪರಿಶೀಲಿಸಿದಾಗ ಸಾಬೀತಾಗಿದೆ ‘ ಎಂದು ರೆಫರಿ ಆಗಿ ಕಾರ್ಯ ನಿರ್ವಹಿಸಿದ್ದ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com