Cricket : ವಿಶ್ವ ದಾಖಲೆಯ ಮೊತ್ತ ಸೇರಿಸಿದ ಇಂಗ್ಲೆಂಡ್ : ಆಸೀಸ್ ವಿರುದ್ಧ 242 ರನ್ ಗೆಲುವು

ಮಂಗಳವಾರ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ 242 ರನ್ ಅಂತರದ ಭಾರೀ ಜಯ ಸಾಧಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 481 ರನ್ ಮೊತ್ತ ದಾಖಲಿಸಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇರುವರೆಗೆ ದಾಖಲಾಗಿರುವ ಅತಿ ದೊಡ್ಡ ಮೊತ್ತ ಇದಾಗಿದೆ.

Image result for england australia 3rd odi

ಇಂಗ್ಲೆಂಡ್ ಪರವಾಗಿ ಭರ್ಜರಿ ಶತಕ ಬಾರಿಸಿದ ಜಾನಿ ಬೇರ್ಸ್ಟೋ 139 ಹಾಗೂ ಅಲೆಕ್ಸ್ ಹೇಲ್ಸ್ 147 ರನ್ ಗಳಿಸಿದರು. ಅರ್ಧಶತಕ ಸಿಡಿಸಿದ ಜೇಸನ್ ರಾಯ್ 82 ಹಾಗೂ ಇಯಾನ್ ಮಾರ್ಗನ್ 67 ರನ್ ಗಳಿಸಿದರು.

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 37 ಓವರ್ ಗಳಲ್ಲಿ 239 ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರವಾಗಿ ಟ್ರಾವಿಸ್ ಹೆಡ್ 51 ಹಾಗೂ ಮಾರ್ಕಸ್ ಸ್ಟಾಯ್ನಿಸ್ 44 ರನ್ ಬಾರಿಸದರು. ಇಂಗ್ಲೆಂಡ್ ಪರವಾಗಿ ಆದಿಲ್ ರಾಶಿದ್ 4 ಹಾಗೂ ಮೋಯಿನ್ ಅಲಿ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com