ಗುದ್ದಲಿ ಹಿಡಿದು ಫೀಲ್ಡಿಗಿಳಿದ ನೂತನ ಶಾಸಕಿ ಸೌಮ್ಯಾ ರೆಡ್ಡಿ : ವಿಡಿಯೋ ವೈರಲ್

ಬೆಂಗಳೂರು : ಜಯನಗರದ ನೂತನ ಶಾಸಕಿಯಾದ ರಾಮಲಿಂಗಾರೆಡ್ಡಿ ಪುತ್ರಿ, ಸೌಮ್ಯಾ ರೆಡ್ಡಿ ಇಂದು ಬೆಳ್ಳಂ ಬೆಳಿಗ್ಗೆ ಕೈಯಲ್ಲಿ ಸುತ್ತಿಗೆ  ಹಿಡಿದು ಫೀಲ್ಡ್ ಗಿಳಿದಿದ್ದಾರೆ. ಆಪರೇಷನ್ ಕ್ಲೀನ್ ಅಂಡ್ ಗ್ರೀನ್​ಗಾಗಿ ಸೌಮ್ಯ ರೆಡ್ಡಿ ಕೆಲಸ ಮಾಡುತ್ತಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಇಂದು ಬೆಳಗ್ಗೆ ಸೌಮ್ಯಾ ರೆಡ್ಡಿ ಕ್ಷೇತ್ರದ ಜನರೊಂದಿಗೆ ಸೇರಿ ಆಪರೇಷನ್‌ ಕ್ಲೀನ್‌ ಎಂಡ್‌ ಗ್ರೀನ್‌ಗೆ ಕೈ ಹಾಕಿದ್ದಾರೆ. ಇದರ ಭಾಗವಾಗಿ ಜಯನಗರದ ಬೈರಸಂದ್ರದಲ್ಲಿ ಸ್ವಚ್ಛ ಮಾಡುವ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಕಂಡುಬಂದ ಹಳೇ ಕಾಪೌಂಡ್ ಒಡೆಯಲು ಸುತ್ತಿಗೆ ಹಿಡಿದು ಹರಸಾಹಸ ಪಟ್ಟಿದ್ದಾರೆ.

ಏನೇ ಆಗಲಿ ಜಯನಗರದಿಂದ ಗೆದ್ದು ಬಂದ ಸೌಮ್ಯಾ ರೆಡ್ಡಿ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಕ್ಷೇತ್ರದ ಜನ ಮಾತಾಡಿಕೊಳ್ಳುತ್ತಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Leave a Reply

Your email address will not be published.