ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಗೊತ್ತಿದೆ, ಇದರ ಮರ್ಮವನ್ನು ಕೊನೆಗೆ ಹೇಳ್ತೀನಿ : ಡಿಕೆಶಿ

ಬೆಂಗಳೂರು : ಎಲ್ಲರೂ ನನ್ನನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ ಏಕೆ ಎಂದು ನನಗೆ ಗೊತ್ತಿರುವುದಾಗಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಕುರಿತು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿ ಕಿಡಿಕಾರಿದ್ದಾರೆ.

ಐಟಿ ದಾಳಿ ನಡೆದ ವೇಳೆ ಅಘೋಷಿತ ಆಸ್ತಿ ಪತ್ತೆಯಾದ ಕುರಿತು ತನಿಖೆ ವೇಳೆ  ಡಿಕೆಶಿ ಅವರ ಆಪ್ತ ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಅವರ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ಆಕ್ರಮ ಹಣಕಾಸು ವ್ಯವಹಾರಗಳ ವಿಚಾರಗಳನ್ನು  ಐಟಿ ಪತ್ತೆ ಹಚ್ಚಿರುವ ಕುರಿತು ವರದಿಯಾಗಿದೆ. ಡೈರಿಯಲ್ಲಿ ಹಲವು ಕೋಡ್‌ ವರ್ಡ್‌ಗಳು ಮತ್ತು ಹೈಕಮಾಂಡ್‌ಗೆ ಹಣ ಸಂದಾಯವಾಗಿದೆ ಎಂಬ ಕುರಿತು ವಿವರಗಳಿವೆ ಎನ್ನಲಾಗಿದೆ.

MLA DK Shivakumar at Assembly hall, Vidhana Soudha, following vote of confidence of Chief Minister B S Yeddyurappa, in Bengaluru on Saturday 19th May 2018

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ  ಡಿ.ಕೆ.ಶಿ ಡೈರಿಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಬೇಕಾದಷ್ಟು ಕಾನೂನುಗಳು ಬಂದಿವೆ. ನಮ್ಮತ್ರನೂ ಡೈರಿಗಳು ಇವೆ. ಆದರೆ ನಿಜಕ್ಕೂ ನನಗೆ ಆಶ್ಚರ್ಯ ಆಗುತ್ತಿದೆ. ನಾನು ಎಂದಿಗೂ ಅಂತಹ ತಪ್ಪುಗಳನ್ನು ಮಾಡಿಲ್ಲ ಎಂದಿದ್ದಾರೆ.

ನಮ್ಮತ್ರನೂ ಹಲವು ಡೈರಿಗಳಿವೆ. ನನಗೆ, ನನ್ನ ಸಹೋದರ, ತಾಯಿ ಎಲ್ಲರಿಗೂ ನೊಟೀಸ್ ನೀಡಲಾಗುತ್ತಿದೆ. ನಾನೊಬ್ಬನೆ ಇರುವುದೆ? ಬೇರೆಯವರು ಇಲ್ಲವೆ?. ನನ್ನಷ್ಟು ಕಿರುಕುಳ ಯಾರಿಗೂ ನೀಡಿಲ್ಲ. ಬಹಳಷ್ಟು ಹೆಸರು ಕೇಳಿ ಬರುತ್ತವೆ, ನಮ್ಮ ಪಕ್ಷದ ಹೆಸರೂ ಬಂದಿದೆ. ನಾನು ಕೊನೆವರೆಗೆ ಕಾದು ನೋಡುತ್ತೇನೆ. ನನಗೆ ಎಲ್ಲಾ ಗೊತ್ತಿದೆ. ಅದರ ಮರ್ಮ ಏನು ಅಂತ ಕೊನೆಯಲ್ಲಿ ಹೇಳುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com