ಡಿ.ಕೆ. ಶಿವಕುಮಾರ್ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ಜಿ.ಪರಮೇಶ್ವರ್‌

ಬೆಂಗಳೂರು : ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ಐಟಿ ಹಾಗೂ ಇಡಿ ಇಲಾಖೆಗಳು ಕಾಂಗ್ರೆಸ್ ಸರ್ಕಾರದ ಸಚಿವರುಗಳ ಹದ್ದಿನ ಕಣ್ಣೀಟುರುವ ಹಾಗಿದೆ ಎಂದು ಉಪಮುಖ್ಯಮಂತ್ರಿ ಜಮೀರ್ ಅಹ್ಮದ್ ಹೇಳಿದ್ದಾರೆ.

ಎರಡು ದಿನದ ಹಿಂದೆ ಡಿಕೆಶಿಗೆ ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿದ್ದು, ಖುದ್ದು ಹಾಜರಾಗಲು ನೋಟಿಸ್ ಜಾರಿ ಮಾಡಿದೆ. ಇನ್ನು ಡಿಕೆಶಿಗೆ ನೋಟಿಸ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ನವರನ್ನು ಗುರುತಿಸಿ ಐಟಿ,ಇಡಿ ಇಲಾಖೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಡಿಕೆಶಿ ಕಾನೂನು ಪ್ರಕಾರ ಐಟಿಗೆ ದಾಖಲೆ ಸಲ್ಲಿಸುತ್ತಾರೆ. ಡಿಕೆಶಿಯವರ ಕಾನೂನು ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ತನ್ವೀರ್ ಸೇಠ್ ಹಾಗೂ ಜಮೀರ್ ಅಹಮ್ಮದ್ ಬಹಿರಂಗವಾಗಿ ಹೇಳಿಕೆ ನೀಡಬಾರದೆಂದು ಈ ಹಿಂದೆಯೇ ವಾರ್ನ್ ಮಾಡಿದ್ದೇವೆ. ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆ ಯಾರೂ ಕೊಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

One thought on “ಡಿ.ಕೆ. ಶಿವಕುಮಾರ್ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ಜಿ.ಪರಮೇಶ್ವರ್‌

Leave a Reply

Your email address will not be published.