ಬಿನ್ನಿಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಜಯ : ಅಮ್ಮನ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಮಗಳು

ಬೆಂಗಳೂರು : ಮಹಾನಗರ ಪಾಲಿಕೆಯ ಬಿನ್ನಿಪೇಟೆ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ  ಜೆಡಿಎಸ್‌ ಗೆಲುವು ಸಾಧಿಸಿದೆ. ಇದರಿಂದಾಗಿ ಕಾಂಗ್ರೆಸ್‌ನ  ಭದ್ರಕೋಟೆಯಾಗಿದ್ದ ಬಿನ್ನಿಪೇಟೆ ಈಗ ಜೆಡಿಎಸ್‌ ತೆಕ್ಕೆಗೆ ಜಾರಿದೆ.

ಜೆಡಿಎಸ್ ಗೆಲುವಿನಿಂದಾಗಿ ದಿನೇಶ್ ಗುಂಡೂರಾವ್ ಅವರಿಗೆ ತೀವ್ರ ಮುಖಭಂಗವಾಗಿದ್ದು, ದಿನೇಶ್‌ ಗುಂಡೂರಾವ್ ಅವರ ಶಿಷ್ಯ ಮಾಜಿ ಕಾರ್ಪೋರೇಟರ್ ಬಿಟಿಎಸ್ ನಾಗರಾಜ್ ಹೀನಾಯವಾಗಿ ಸೋಲುಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ನಾಗರಾಜ್ ಅವರು 7,188 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರನ್ನು 1939 ಮತಗಳಿಂದ ಸೋಲಿಸಿದರು. ವಿದ್ಯಾ 5249 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ  2455 ಮತಗಳನ್ನು ಗಳಿಸಿದ್ದಾರೆ.

ಕಾಂಗ್ರೆಸ್‌ನ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್‌ ಅವರ ನಿಧನದಿಂದ ಬಿನ್ನಿಪೇಟೆ ವಾರ್ಡ್ ಸಂಖ್ಯೆ 121ರ ಸದಸ್ಯತ್ವ ತೆರವಾಗಿತ್ತು. ಈ ಸ್ಥಾನಕ್ಕೆ ಅವರ ಮಗಳು ಐಶ್ವರ್ಯಾ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ನಿರೀಕ್ಷೆಯಿತ್ತು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಬಿಟಿಎಸ್ ನಾಗರಾಜ್ ಅವರು ಇದ್ದಕ್ಕಿದ್ದಂತೆ ಜೆಡಿಎಸ್ ಸೇರ್ಪಡೆಗೊಂಡಿದ್ದರು.  ಇದರಿಂದ ನಾಗರಾಜ್ ಅವರ ಮಗಳು ಐಶ್ವರ್ಯಾ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com