ಚೈನಾ ದೇಶದಲ್ಲಿ ಮೈಸೂರಿಗನ ಯೋಗ ಪಾಠ : ಕನ್ನಡಿಗ ಸುರೇಶ್ ಪುಟ್ಟಲಿಂಗಪ್ಪ ಸಾಧನೆ

ನಮ್ಮ ದೇಶದ ಹೆಮ್ಮೆಯ ಸಂಸ್ಕೃತಿಯಲ್ಲಿ ಯೋಗ ಕೂಡ ಒಂದು. ಈ ಯೋಗ ಇವತ್ತು ದೇಶ ಮಾತ್ರವಲ್ಲದೇ ಹೊರ ದೇಶದಲ್ಲೂ ಕೂಡ ಹೆಸರುವಾಸಿಯಾಗಿದೆ. ಆದ್ರೆ, ಹೊರ ರಾಷ್ಟ್ರದಲ್ಲಿ ಇಂಡಿಯನ್ ಯೋಗಾಕ್ಕೆ ಅದರಲ್ಲೂ ಮೈಸೂರು ಯೋಗಕ್ಕೆ ಸಖತ್ ಡಿಮ್ಯಾಂಡ್ ಇದೆ. ಹಾಗಾಗಿನೇ ಮೈಸೂರಿಗೆ ನೂರಾರು ಸಂಖ್ಯೆಯಲ್ಲಿ ವಿದೇಶಿಗರು ಬಂದು ಇಲ್ಲಿ ಯೋಗಾಭ್ಯಾಸ ಮಾಡ್ತಾರೆ. ಇವುಗಳ ಮಧ್ಯೆಯೇ ಇವತ್ತು ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರಿ ಮೈಸೂರಿನ ಸುರೇಶ್ ಪುಟ್ಟಲಿಂಗಪ್ಪ ಎಂಬುವವರು ಚೈನಾಗೆ ಯೋಗ ಗುರುವಾಗಿದ್ದಾರೆ.

ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಸುರೇಶ್ ಇವತ್ತು ಚೈನಾ ದೇಶಕ್ಕೆ ಗುರುವಾಗಿದ್ದಾರೆ. ಬರೋಬ್ಬರಿ 14 ವರ್ಷಗಳಿಂದ ಯೋಗ ಕಲಿಸುತ್ತಿರುವ ಇವ್ರು ವಿಶ್ವ ಯೋಗಾ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗದಲ್ಲಿ ಭಾಗಿಯಾಗಲು ತವರಿಗೆ ಬಂದಿದ್ದಾರೆ. ಈ ಹಿಂದೆಯೇ ನಮ್ಮ ಮೈಸೂರು ಯೋಗ ಗಿನ್ನಿಸ್ ದಾಖಲೆ ಮಾಡಿಯಾಗಿದೆ. ಹಾಗಾಗಿ ಈ ಬಾರಿ ಮತ್ತೊಂದು ಬೃಹತ್ ಯೋಗಾದಲ್ಲಿ ಭಾಗಿಯಾಗಲು ಸುರೇಶ್ ಪುಟ್ಟಲಿಂಗಪ್ಪ ಸೇರಿದಂತೆ ಕುಟುಂಬದ 35 ಮಂದಿಯೂ ಕೂಡ ಭಾಗಿಯಾಗಲಿದ್ದಾರೆ. ವಿಶೇಷ ಅಂದ್ರೆ, ಇವ್ರ ಇಡೀ ಕುಟುಂಬವೇ ಇದೀಗಾ ರೋಗ ಮುಕ್ತ ಯೋಗ ಕುಟುಂಬ. ಇವ್ರ ಕುಟುಂಬದಲ್ಲಿರುವ ಸುರೇಶ್ ಹಾಗೂ ಪತ್ನಿ, ಅಕ್ಕ- ಅವ್ರ ಮಕ್ಕಳು ದೊಡ್ಡಪ್ಪನ್ನ ಮಕ್ಕಳು, ದೊಡ್ಡಮ್ಮನ್ನ ಮಕ್ಕಳು ಸೇರಿದಂತೆ ಬರೋಬ್ಬರಿ 35 ಮಂದಿಯೂ ಯೋಗಾ ಮಾಡ್ತಾರೆ. ಮಾತ್ರವಲ್ಲ, ಎಲ್ಲರಿಗೂ ಯೋಗ ಕಲಿಸಿ ಕೊಡ್ತಾರೆ.

ಇನ್ನೂ ಸುರೇಶ್ ಹೇಳಿಕೊಡುವ ಯೋಗಾವೇ ಬೇರೆ. ಈ ಯೋಗದಿಂದ ರೋಗ ದೂರವಾಗತ್ತೆ. ಮಾತ್ರವಲ್ಲ, ಇವ್ರು ಹೇಳಿಕೊಡುವ ಆಸನಗಳು ನಿಜಕ್ಕೂ ಮಹಿಳೆಯರಿಗೆ ಅದರಲ್ಲೂ ಗಭರ್ಿಣಿಯರಿಗೆ ತುಂಭಾನೆ ಹೆಚ್ಚಿನ ಅನುಕೂಲ ಆಗಲಿದೆ. ಹಾಗಾಗಿಯೇ ಇವ್ರು ಚೈನಾದಲ್ಲಿ ಆಯೋಜನೆ ಮಾಡುವ ಯೋಗಾದಲ್ಲಿ ನೂರಾರು ಸಂಖ್ಯೆಯ ಗಭರ್ೀಣಿಯರು ಭಾಗಿಯಾಗ್ತಾರೆ. ವಿಶೇಷ ಅಂದ್ರೆ, ಇವ್ರು ಗಭರ್ೀಣಿಯರಿಗೆ ಹೇಳಿಕೊಡುವ ಯೋಗದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಾರ್ಮಲ್ ಡೆಲಿವರಿ ಆಗಬೇಕೆಂಬುದು ಮೊದಲ ಉದ್ದೇಶ ಆಗಿದೆ. ಹಾಗಾಗಿ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಇವ್ರ ಬಳಿ ಯೋಗ ಕಲಿತಿದ್ದಾರೆ. ಮಾತ್ರವಲ್ಲ, ಯುವತಿಯರಿಗಾಗಿಯೂ ವಿಶೇಷ ಯೋಗವನ್ನ ಆಯೋಜನೆ ಮಾಡ್ತಾರೆ. ಹಾಗಾಗಿಯೇ ಇವತ್ತು ಚೈನಾ ದೇಶದಲ್ಲಿ ಇವ್ರು ಆಯೋಜನೆ ಮಾಡಿರುವ ನೂರಾರು ಕಾರ್ಯಕ್ರಮದಲ್ಲಿ ಮಹಿಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗ್ತಾರೆ.

ಇನ್ನೂ ಮೈಸೂರಿಗೆ ಆಗಮಿಸಿರುವ ಸುರೇಶ್ ಸದ್ಯ ತಮ್ಮ ಕುಟುಂಬ ಸದಸ್ಯರ ಜೊತೆ ಯೋಗವನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ. ಬೆಳ್ಳಂಬೆಳಗ್ಗೆ ಇವ್ರು ಮಾಡ್ತೀರೋ ಯೋಗವೂ ಕೂಡ ವಿಶೇಷವೇ. ಯಾಕಂದ್ರೆ, ಇಲ್ಲಿಯೂ ಕೂಡ ತಮ್ಮ ಕುಟುಂಬದವ್ರು ಒಟ್ಟಾಗಿ ಸೇರಿ ಯೋಗ ಮಾಡ್ತಿದ್ದಾರೆ. ಹಾಗಾಗಿ ಚೈನಾದಿಂದ ಗುರುಗಳಾಗಿ ಬಂದಿದ್ರು ಕೂಡ ಇವತ್ತು ಪ್ರಾಕ್ಟೀಸ್ನ್ನ ಮರೆತ್ತಿಲ್ಲ. ಹಾಗಾಗಿ ಇವತ್ತು ಕೂಡ ಪಾಕರ್್ನಲ್ಲಿ ಸರಳತೆಯಲ್ಲೇ ಕುಟುಂಬದೊಂದಿಗೆ ಯೋಗ ಮಾಡ್ತಿದ್ದಾರೆ. ಅಲ್ಲದೆ, ವಿಶ್ವ ಯೋಗ ದಿನಾಚರಣೆಯಂದು ದಾಖಲೆಯ ಯೋಗದಲ್ಲಿ ಭಾಗಿಯಾಗಿ ಮತ್ತೊಮ್ಮೆ ಭಾರತಕ್ಕೆ ಕೀರಿಟ ಬರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ನಮ್ಮ ರಾಜ್ಯದಲ್ಲಿರುವ ಪ್ರತಿಯೊಬ್ಬರು ವಿಶ್ವ ಯೋಗ ದಿನಾಚರಣೆಗೆ ಭಾಗಿಯಾಗಿ ಮತ್ತೊಂದು ಗಿನ್ನಿಸ್ ದಾಖಲೆ ಬರೆಯೋಣ ಅನ್ನೋ ಆಸೆ ಸುರೇಶ್ ಪುಟ್ಟಲಿಂಗಪ್ಪ ಅವರದ್ದಾಗಿದೆ.

ಒಟ್ಟಾರೆ, ಚೈನಾಗೆ ಮೈಸೂರಿಗರೊಬ್ಬರು ಗುರುವಾಗಿ ಪಾಠ ಮಾಡ್ತೀದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿಯಾದ್ರೆ, ಎಲ್ಲರೂ ಯೋಗ ಕಲಿತು ಆರೋಗ್ಯವಾಗಿರಿ ಎಂಬ ಸಂದೇಶ ಸುರೇಶ್ ಅವ್ರದ್ದು. ಮಾತ್ರವಲ್ಲ, ಇಷ್ಟು ದೊಡ್ಡ ಸಾಧನೆ ಮಾಡಿದ್ರು ಕೂಡ ನಾನೂ ಕೂಡ ಕುಟುಂಬ ಸಮೇತವಾಗಿ ವಿಶ್ವ ಯೋಗಾ ದಿನಾಚರಣೆಯಲ್ಲಿ ಭಾಗಿಯಾಗ್ತಿನಿ ಅನ್ನೋ ಸುರೇಶ್ ಪುಟ್ಟಸ್ವಾಮಿ ಅವ್ರ ಸರಳತೆಗೆ ಹಾಟ್ಸ್ ಆಫ್ ಹೇಳಲೇ ಬೇಕು.

 

Leave a Reply

Your email address will not be published.