ಮೇಷ್ಟ್ರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು : ಮನಮಿಡಿಯುವ ಕ್ಷಣಕ್ಕೆ ಸಾಕ್ಷಿಯಾದ ಯಾದಗಿರಿ

ಯಾದಗಿರಿ : ಶಾಲಾ ಶಿಕ್ಷಕ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ಸಂಕ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವರ್ಗಾವಣೆಗೊಂಡಿದ್ದಾರೆ. ಶಿಕ್ಷಕನನ್ನು ಬಿಳ್ಕೊಡುವ ಸಂದರ್ಭದಲ್ಲಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಲ್ಲದೆ ಶಾಲಾ ಮಕ್ಕಳ ತಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಶಿಕ್ಷಕ ಕೂಡ ಕಣ್ಣೀರು ಹಾಕಿದ್ದಾರೆ. ಕಳೆದ 8 ವರ್ಷಗಳಿಂದ ಶಿಕ್ಷಕ ಚಲುವರಾಜ್ ಸಂಕ್ಲಾಪುರ ಗ್ರಾಮದ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. 1 ರಿಂದ 7 ನೇ ತರಗತಿ ವರೆಗಿರುವ ಶಾಲೆಯಲ್ಲಿ, ನೂರಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದರು. ಇಂಗ್ಲಿಷ್ ವಿಷಯ ಬೋಧನೆ ಮಾಡುವ ಶಿಕ್ಷಕ ಚಲುವರಾಜ್ ರನ್ನು ಮಕ್ಕಳು ತುಂಬಾ ಹಚ್ಚಿಕೊಂಡಿದ್ದರು. ಅಲ್ಲದೆ ಚಲುವರಾಜ್ ಶಾಲೆಗೆ ಬಂದ ಮೇಲೆ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ, ಮಕ್ಕಳ ಸಂಖ್ಯೆ ಹೆಚ್ಚಳವಾಗಿತ್ತು. ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸದೆ ಎಲ್ಲರು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದರು.

ಇಂತಹ ಒಳ್ಳೆಯ ಪರಿಸರ ನಿರ್ಮಾಣ ಮಾಡಿದ ಶಿಕ್ಷಕ ತಮ್ಮಿಂದ ದೂರಾಗುತ್ತಿರುವುದಕ್ಕೆ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೂಲತಃ ಚಾಮರಾಜನಗರ ಜಿಲ್ಲೆಯ ನಿವಾಸಿಯಾಗಿದ್ದು, ಈಗಾಗಲೇ ಗ್ರಾಮದ ಪಂಚಾಯತ್ ಪಿಡಿಒ ಆಗಿ ನೇಮಕವಾಗಿದೆ. ಅನಿವಾರ್ಯ ಕಾರಣದಿಂದ ತಮ್ಮ ಜಿಲ್ಲೆಗೆ ತೆರಳಬೇಕಾಗಿದೆ. ಸಂಕ್ಲಾಪುರ ಗ್ರಾಮದ ಜನರು, ಶಾಲಾ ಮಕ್ಕಳ ಪ್ರೀತಿಗೆ ತಾನು ಚಿರರುಣಿಯಾಗಿರುತ್ತೇನೆ ಎಂದು ವರ್ಗಾವಣೆ ಗೊಂಡಿರುವ ಶಿಕ್ಷಕ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com