ಮಗುವಿಗೆ ಹೆಸರಿಡಲು ಎಲೆಕ್ಷನ್‌ : ನಾಗ್ಪುರ ದಂಪತಿಯ ವಿನೂತನ ಪ್ರಯೋಗಕ್ಕೆ ಸಿಕ್ತು ಭಾರೀ ರೆಸ್ಪಾನ್ಸ್

ನಾಗ್ಪುರ : ಮನೆಯಲ್ಲಿ ಮಗು ಹುಟ್ಟಿದಾಗ ಏನು ಹೆಸರಿಡಬೇಕೆಂದು ತಂದೆ-ತಾಯಿ ಅಥವಾ ಹತ್ತಿರದ ಸಂಬಂಧಿಗಳು ನಿರ್ಧರಿಸುತ್ತಾರೆ. ಆದರೆ ನಾಗ್ಪುರದಲ್ಲಿ ಕುಟುಂಬವೊಂದು ಮಗುವಿಗೆ ಹೆಸರಿಡುವ ಸಲುವಾಗಿ ಚುನಾವಣೆಯನ್ನೇ ನಡೆಸಿದ್ದು, ಆ ಚುನಾವಣೆಯಲ್ಲಿ ಬಹುಮತ ಪಡೆದ ಹೆಸರನ್ನು ಮಗುವಿಗೆ ಇಟ್ಟಿದ್ದಾರೆ.

ನಾಗ್ಪುರದ ಗೊಂಡಿಯಾ ಜಿಲ್ಲೆಯ ಮಿಥುನ್ ಹಾಗೂ ಮಾನಸಿ ಬಾಂಗ್ ದಂಪತಿ ಈ ಹೊಸ ಪ್ರಯೋಗ ಮಾಡಿದ್ದಾರೆ. ಏಪ್ರಿಲ್ 5ರಂದು ಈ ದಂಪತಿಗೆ ಗಂಡು ಮಗು ಜನಿಸಿದ್ದು, ಮಗುವಿಗೆ ಏನು ಹೆಸರಿಡಬೇಕು ಎಂದು ಚಿಂಚೆ ಶುರುವಾಗಿತ್ತು. ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸುತ್ತಿದ್ದರು. ಆದರೆ ಅದರಲ್ಲಿ ಯಾವ ಹೆಸರಿಡುವುದು ಎಂದು ತಿಳಿಯಲಾರದೆ ಆ ಮೂರು ಹೆಸರಿನಲ್ಲಿ ಯಾವ ಹೆಸರನ್ನು ಿಡಬೇಕು ಎಂದು ನಿರ್ಧರಿಸಲು ಜೂನ್ 15ರಂದು ಚುನಾವಣೆ ಮಾಡಿದ್ದರು. ಇದಕ್ಕಾಗಿ ಮನೆಯೆದುರು ಬಾಲಕ್‌ ನಾಮ್‌ ಚಾಯನ್‌ ಆಯೋಗ್‌ ಎಂದು ಬ್ಯಾನರ್‌ ಕಟ್ಟಿ ಬ್ಯಾಲೆಟ್‌ ಬಾಕ್ಸ್ ಸಹ ಇಟ್ಟಿದ್ದರು. ಈ ಚುನಾವಣೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಗಳು ಪಾಲ್ಗೊಂಡು ಮತ ಚಲಾಯಿಸಿದ್ದರು.

ಒಟ್ಟು 192 ಮತ ಚಲಾವಣೆಯಾಗಿದ್ದು, ಯಕ್ಷ್​, ಯುವಾನ್​, ಯುವಿಕ್​ ಎಂಬ ಹೆಸರುಗಳನ್ನು ಸೂಚಿಸಿದ್ದರು. ಈ ಮೂರು ಹೆಸರಲ್ಲಿ  ಯುವಾನ್‌ ಹೆಸರಿಗೆ 92 ಮತ ಬಂದ ಹಿನ್ನೆಲೆಯಲ್ಲಿ ಮಗುವಿಗೆ ಅದೇ ಹೆಸರಿಡಲಾಗಿದೆ ಎಂದು ತಂದೆ ಮಿಥುನ್ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಮಾಜಿ ಲೋಕಸಭಾ ಸದಸ್ಯ ನಾನಾ ಪಟೋಲೆ, ಸ್ಥಳೀಯ ಬಿಜೆಪಿ ಶಾಸಕ ಮತ್ತು ಮಾಜಿ ಶಾಸಕರು  ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com