ಸರ್ಕಾರದ ಕುರಿತು ಸಿದ್ದರಾಮಯ್ಯನವರಿಗೆ ಯಾವ ಅಸಮಧಾನವೂ ಇಲ್ಲ : ಎಚ್.ಡಿ ರೇವಣ್ಣ

ಮಂಗಳೂರಿನಲ್ಲಿ ಸಚಿವ ಎಚ್.ಡಿ‌ ರೇವಣ್ಣ ಹೇಳಿಕೆ ನೀಡಿದ್ದಾರೆ. ಬಜೆಟ್ ಮಂಡನೆ ಕುರಿತಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು ‘ ಬಜೆಟ್ ಮಂಡನೆ ಕುರಿತಾಗಿ ಯಾವುದೇ ಗೊಂದಲ ಇಲ್ಲ. ಸಿಎಂ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡ್ತಾರೆ.

ಚಾರ್ಮಾಡಿಯಿಂದ ಬರುವಾಗ ಸಿದ್ದರಾಮಯ್ಯ ಆರೋಗ್ಯ ವಿಚಾರಣೆ ಮಾಡಿ ಮಾತನಾಡಿ ಬಂದಿದ್ದೀನಿ. ಬೇರಾವ ರಾಜಕೀಯ ಚರ್ಚೆ ನಡೆದಿಲ್ಲ. ದೆಹಲಿಗೆ ಹೋದಾಗ ರಾಹುಲ್ ಗಾಂಧಿ ಭೇಟಿಯಾಗಿದ್ದೆ. ಇದಕ್ಕೆ ಯಾವುದೇ ಬಣ್ಣ ಕಟ್ಟುವ ಅವಷ್ಯಕತೆ ಇಲ್ಲ. ಸರ್ಕಾರದ ಕುರಿತಾಗಿ ಸಿದ್ದರಾಮಯ್ಯಗೆ ಯಾವ ಅಸಮಾಧಾನ ಇಲ್ಲ. ಒಳ್ಳೆಯ ಕೆಲಸ ಮಾಡ್ಕೊಂಡು ಹೋಗಿ ನಮ್ದೇನಿಲ್ಲ ಅಂದಿದ್ದಾರೆ ‘ ಎಂದು ಹೇಳಿದ್ದಾರೆ.

ಶಿರಾಡಿ ಘಾಟ್ ಕಾಮಗಾರಿ‌ ವಿಳಂಬ ವಿಚಾರವಾಗಿ ಮಾತನಾಡಿದ ಅವರು ‘ ಮಳೆಯಿಂದ ಕಾಮಗಾರಿ‌ ಸ್ಬಲ್ಪ ಕುಂಠಿತ ಆಗಿದೆ. ಜುಲೈ ಮೊದಲ ವಾರದಲ್ಲಿ ಶಿರಾಡಿ ಘಾಟ್ ಸಂಚಾರ ಮುಕ್ತವಾಗಲಿದೆ. ಚಾರ್ಮಾಡಿ ಘಾಟ್ ರಸ್ತೆ ಪರಿಶೀಲನೆ ಮಾಡಿದ್ದೇನೆ. ಘಾಟ್ ರಸ್ತೆ ಸಂಪೂರ್ಣ ದುರಸ್ತಿಗೆ 250 ಕೋಟಿ ಶಾಶ್ವತ ಕಾಮಗಾರಿ ಅಗತ್ಯ, ಇದಕ್ಕಾಗಿ ಅಗತ್ಯ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com