ಸಕಾಲಕ್ಕೆ ಬಾರದ ಪ್ರಶ್ನೆಪತ್ರಿಕೆ : ಗುಲ್ಬರ್ಗ ವಿ.ವಿ ಬೇಜವಾಬ್ದಾರಿತನಕ್ಕೆ ವಿದ್ಯಾರ್ಥಿಗಳ ಹಿಡಿಶಾಪ

ರಾಯಚೂರು : ಸಕಾಲಕ್ಕೆ ಪ್ರಶ್ನೆ ಪತ್ರಿಕೆ ಬಾರದ ಹಿನ್ನೆಲೆಯಲ್ಲಿ ಸ್ನಾತಕೋತ್ತರ  ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಕಾಲಕಳೆದ ಸಂಗತಿ ಬೆಳಕಿಗೆ ಬಂದಿದೆ.

ಇಂದು ಗುಲ್ಬರ್ಗಾ ವಿವಿಯ ಸ್ನಾತಕೋತ್ರರ ಪರೀಕ್ಷೆ ನಡೆಯುತ್ತಿತ್ತು. ಎಂ.ಕಾಂ ದ್ವೀತಿಯ ಸೆಮಿಸ್ಟರ್‌ನ ಸಾರ್ವಜನಿಕ ಸಂಪರ್ಕ​ ಹಾಗೂ ಎಂಎ ಇತಿಹಾಸ ವಿಷಯದ ಪ್ರಶ್ನೆ ಪತ್ರಿಕೆ ಬಾರದೆ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.

ಬೆಳಗ್ಗೆ 10 ಗಂಟೆಗೆ ಆರಂಭವಾಗಿದ್ದ ಪರೀಕ್ಷೆ 11 ಗಂಟೆಯಾದರೂ ಪ್ರಾರಂಭವಾಗಿರಲಿಲ್ಲ. ಒಂದು ಗಂಟೆಕಾದ ಬಳಿಕ ಪ್ರಶ್ನಾ ಪತ್ರಿಕೆ ವಿದ್ಯಾರ್ಥಿಗಳ ಕೈ ಸೇರಿದ್ದು, ವಿಶ್ವವಿದ್ಯಾಲಯದ ಬೇಜವಾಬ್ದಾರಿತನಕ್ಕೆ ವಿದ್ಯಾರ್ಥಿಗಳು ಹಿಡಿಶಾಪ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com