ಕರಾವಳಿಯಲ್ಲಿ ಮತ್ತೊಮ್ಮೆ ಪಬ್‌ ದಾಳಿಯ ಎಚ್ಚರಿಕೆ ನೀಡಿದ ವಿಶ್ವ ಹಿಂದೂ ಪರಿಷತ್‌ !

ಮಂಗಳೂರು : ಮತ್ತೊಮ್ಮೆ ಪಬ್ ದಾಳಿ ನಡೆಸೋ ಬಗ್ಗೆ ವಿಶ್ವ ಹಿಂದೂ ಪರಿಷತ್ ಪರೋಕ್ಷ ಎಚ್ಚರಿಕೆ ನೀಡಿದೆ. ವಿಶ್ವ ಹಿಂದೂ ಪರಿಷತ್‌ನ ಮಹಿಳಾ ಪ್ರಮುಖ್ ಆಶಾ ಜಗದೀಶ್ ಈ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಲೇಡಿಸ್ ಲೈವ್ ಬಾಂಡ್ ಅನುಮತಿ ರದ್ದುಗೊಳಿಸಲು ಆಗ್ರಹಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಶಾ ಜಗದೀಶ್‌ ಮಂಗಳೂರಿನಲ್ಲಿ ಪಬ್ ದಾಳಿ ಹೋಂ ಸ್ಟೇ ದಾಳಿ ಯಾಕೆ ನಡೆಯಿತು ಎಂದು ನಿಮಗೆ ಈಗ ಅರ್ಥವಾಗಿದೆ. ಇದೇ ರೀತಿ ಮುಂದುವರಿದರೆ ಅದೇ ರೀತಿ‌ ಗಲಾಟೆಗಳು ಮತ್ತೆ ಆಗೋ ಸಾಧ್ಯತೆ ಇದೆ ಅನ್ನೋ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಇರುವ ಮಸಾಜ್ ಸೆಂಟರ್ ಗಳು, ಪಬ್ ಗಳು, ಲೈವ್ ಬ್ಯಾಂಡ್ ಲೇಡಿಸ್ ಬಾರ್ ಗಳು ಸಮಾಜದ ಸ್ವಾಸ್ಥ ಹಾಳು ಮಾಡುತ್ತಿವೆ. ಜಿಲ್ಲಾಡಳಿತ ಇವುಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ‌ ಹೋರಾಟ ನಡೆಸೋ ಎಚ್ಚರಿಕೆಯನ್ನು ಭಜರಂಗದಳ ಹಾಗೂ ವಿಎಚ್.ಪಿ ನೀಡಿದೆ.

Leave a Reply

Your email address will not be published.