ಜೆಸಿಬಿಯಲ್ಲಿ ಮೆರವಣಿಗೆ ಹೊರಟ ನವದಂಪತಿ : ವಿಭಿನ್ನ ವಿವಾಹ ಮೆರಣಿಗೆಗೆ ಸಾಕ್ಷಿಯಾದ ಮಂಗಳೂರು

ಮಂಗಳೂರು : ಕರಾವಳಿಯಲ್ಲೊಂದು ವಿಶಿಷ್ಟ ವಿವಾಹ ಮೆರವಣಿಗೆ ನಡೆದಿದೆ. ನವ ವಿವಾಹಿತ ಜೋಡಿಯೊಂದು ಜೆಸಿಬಿಯಲ್ಲಿ ಮೆರವಣಿ ಗೆ ಹೋಗಿದ್ದು ಈಗ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಸಂಟ್ಯಾರ ನಿವಾಸಿ ಚೇತನ್‌ ಹಾಗೂ ಮಮತಾ ಎನ್ನುವವರ ಮದುವೆ ನಡೆದಿತ್ತು. ವರ ಚೇತನ್‌ ಅನೇಕ ವರ್ಷಗಳಿಂದ ಡೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನವ ಜೋಡಿ ಜೆಸಿಬಿ ಏರಿ ಮೆರವಣಿಗೆ ಹೊರಟಿದ್ದಾರೆ.

ವಿವಾಹವಾದ ಬಳಿಕ ವಧು-ವರರಿಬ್ಬರು ಸುಮಾರು 2 ಕಿ.ಮೀ ವರೆಗೂ ಜೆಸಿಬಿ ಯಂತ್ರದ ಮೇಲೆ  ಮಾಣಿ -ಮೈಸೂರು ಹೆದ್ದಾರಿಯಲ್ಲಿ ದಿಬ್ಬಣ ಹೊರಟಿದ್ದು, ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.

Leave a Reply

Your email address will not be published.