ಕಾರಿಗೆ ಬೈಕ್‌ ಡಿಕ್ಕಿ : ಪವಾಡ ಸದೃಶ್ಯ ರೀತಿಯಲ್ಲಿ ಬಚಾವಾದ ಚಾಲಕ : ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಮಂಗಳೂರು : ವೇಗವಾಗಿ ಬಂದ ಬೈಕ್‌ ನಸವಾರನೊಬ್ಬ ಯೂಟರ್ನ್‌ ಮಾಡುತ್ತಿದ್ದ ಕಾರಿಗೆ ಡಿಕ್ಕಿಯಾದ ಘಟನೆ ಮಂಗಳೂರಿನ ಬೋಂದೆಲ್‌ ಬಳಿ ನಡೆದಿದೆ .

ಬೈಕ್ ಸವಾರ ಮಂಗಳೂರಿನ ಬಜಪೆ ಏರ್ ಪೋರ್ಟ್ ಕಡೆಗೆ ವೇಗದಿಂದ ತೆರಳುತ್ತಿದ್ದ. ಇದೇ ಸಮಯದಲ್ಲಿ ಕಾರಿನ ಚಾಲಕ ಚರ್ಚ್ ಮುಂಭಾಗದಲ್ಲಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ. ಆದ್ದರಿಂದ ವೇಗವಾಗಿ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಸವಾರ ಕಾರಿನ ಮೇಲ್ಭಾಗದಿಂದ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದಾನೆ.

ಆದರೆ ಹೆಲ್ಮೆಟ್ ಹಾಕ್ಕೊಂಡಿದ್ದರಿಂದ ಬೈಕ್ ಸವಾರಿ ಮಾಡುತ್ತಿದ್ದ ಯುವಕನ ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ದರೂ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಅಪಘಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಲ್ಲೆಡೆ ಹರಿದಾಡುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com