FIFA 2018 : ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೆ ಕೊಹ್ಲಿ ‘ಲಕ್ಕಿ ಚಾರ್ಮ್’ ಆಗಿದ್ದು ಹೇಗೆ..?

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಇಂಗ್ಲೆಂಡ್ ಫುಟ್ಬಾಲ್ ತಂಡದ ಪಾಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಕ್ಕಿ ಚಾರ್ಮ್ ಆಗಿ ಪರಿಣಮಿಸಿದ್ದಾರೆ. ಸೋಮವಾರ ನಡೆದಿದ್ದ ‘ಜಿ’ ಗುಂಪಿನ ಲೀಗ್ ಪಂದ್ಯದಲ್ಲಿ ಟ್ಯುನಿಶಿಯಾ ವಿರುದ್ಧ ಇಂಗ್ಲೆಂಡ್ 2-1 ಗೋಲ್ ಗಳಿಂದ ಗೆಲುವು ಸಾಧಿಸಿತ್ತು.

ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಇಂಗ್ಲೆಂಡ್ ತಂಡದ ಗೆಲುವಿಗಾಗಿ ಶುಭ ಹಾರೈಸಿದ್ದರು. ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ಹ್ಯಾರಿ ಕ್ಯಾನ್ ಅವರಿಗೆ ಗುಡ್ ಲಕ್ ಹೇಳಿದ್ದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಫಿಫಾ ವಿಶ್ವಕಪ್ ಅಭಿಯಾನ ಯಶಸ್ವಿಯಾಗಲಿ ಎಂದು ಟ್ವಿಟರ್ನಲ್ಲಿ ಶುಭಹಾರೈಸಿದ್ದರು.

ಟ್ಯುನಿಶಿಯಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಯದ ಶುಭಾರಂಭ ಮಾಡಿರುವ ಇಂಗ್ಲೆಂಡ್ ಪಾಲಿಗೆ ವಿರಾಟ್ ಕೊಹ್ಲಿ ‘ಲಕ್ಕಿ ಚಾರ್ಮ್’ ಆಗಿದ್ದಾರೆ ಎಂದು ಹೇಳಬಹುದು.

 

Leave a Reply

Your email address will not be published.

Social Media Auto Publish Powered By : XYZScripts.com