ಡಬ್ಬು ಅಂಕಲ್ ಡಾನ್ಸ್‌ಗೇ ಕಾಂಪಿಟೇಷನ್ ಕೊಟ್ಟ ಸ್ಕೂಲ್ ಮಾಸ್ಟರ್ : ಎಲ್ಲೆಡೆ ವೈರಲ್ಲಾಗ್ತಿದೆ ವಿಡಿಯೋ

ಬಾಗಲಕೋಟೆ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರು ಡಬ್ಬು ಅಂಕಲ್ ಡ್ಯಾನ್ಸ್ ಎಂದೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.ಅದಕ್ಕೆ ದೇಶವಿದೇಶದಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.ಎಲ್ಲರೂ ಡಬ್ಬು ಅಂಕಲ್ ಡ್ಯಾನ್ಸ್ ಗೆ ಫಿದಾ ಆಗಿ ಆ ಡ್ಯಾನ್ಸ್ ಜೊತೆ ತಮ್ಮ ಡ್ಯಾನ್ಸ್ ಲಿಂಕ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಬಾಲಿಕೆಯರ ಸರಕಾರಿ ಪಿಯುಸಿ ಕಾಲೇಜು ಪ್ರಿನ್ಸಿಪಾಲ್ ಮಾಡಿದ ಯದ್ವಾ ತದ್ವಾ ನೃತ್ಯವೂ ಕೂಡ ವೈರಲ್ ಆಗಿದೆ. ಹೆಚ್ ಎಲ್ ಶೇಗುಣಶಿ ಎಂಬ ಹೆಸರಿನ ಪ್ರಿನ್ಸಿಪಾಲ್ ಕಳೆದ ವರ್ಷ ಶಿಕ್ಷಕರ ದಿನಾಚರಣೆ ವೇಳೆ ಟೀಚಿಂಗ್ ಡಯಾಸ್ ಮೇಲೆ ನೃತ್ಯ ಮಾಡಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿನಿಯರು ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಪ್ರಿನ್ಸಿಪಾಲ್ ಕುಣಿತಕ್ಕೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಪ್ರಿನ್ಸಿಪಾಲ್ ನೃತ್ಯ ಮಾಡಿದ್ದಾರೆ. ಆದರೆ ಈ ಡ್ಯಾನ್ಸ್ ನೋಡಿ ಕೆಲ ವಿಧ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಆ ದರೆ ಇನ್ನೂ ಕೆಲ ವಿಧ್ಯಾರ್ಥಿಗಳು ಮತ್ತು ಜನರು ಪ್ರಿನ್ಸಿಪಾಲರ ಈ ನೃತ್ಯಕ್ಕೆ ಟೀಕೆ ಮಾಡಿದ್ದಾರೆ. ಒಟ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸಿಪಾಲ್ ರ ನೃತ್ಯಕ್ಕೆ ‌ಪರವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com