ಉಗ್ರ ಚಟುವಟಿಕೆಯಲ್ಲಿ ಬಂಧಿತ ಎಲ್ಲಾ ಹಿಂದುಗಳಿಗೂ ಆರ್‌ಎಸ್‌ಎಸ್‌ ನಂಟು : ಕೈ ನಾಯಕನಿಂದ ಆರೋಪ

ಭೋಪಾಲ್ :  ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್  ಆರ್ ಎಸ್ಎಸ್ ವಿರುದ್ಧ ಉಗ್ರವಾದದ ಆರೋಪ ಹೊರಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಉಗ್ರವಾದದ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಹಿಂದೂಗಳು ಒಂದಲ್ಲಾ ಒಂದು ರೀತಿಯಲ್ಲಿ ಆರ್‌ಎಸ್‌ಎಸ್‌ ಜೊತೆ ನಂಟು ಹೊಂದಿದ್ದಾರೆ ಎಂದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸದ್ಯದಲ್ಲೇ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆ ಏಕತಾ ಯಾತ್ರೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಹತ್ಯೆಗೈದ ಗೋಡ್ಸೆಯಿಂದ ಹಿಡಿದು ಹಲವು ಪ್ರಕರಣಗಳಲ್ಲಿ ನಾವು ಇದನ್ನು ಕಾಣಬಹುದು. ಉಗ್ರ ಪ್ರಕರಣಗಳಲ್ಲಿ ಬಂಧಿತರಾದವರೆಲ್ಲರೂ ಒಂದಲ್ಲಾ ಒಂದು ರೀತಿ ಆರ್‌ಎಸ್‌ಎಸ್‌ ಬೆಂಬಲಿಗರೇ ಆಗಿದ್ದಾರೆ. ಆರ್’ಎಸ್ಎಸ್ ಸಿದ್ಧಾಂತಗಳು ದ್ವೇಷ, ಹಿಂಸೆಯನ್ನು ಹರಡುತ್ತವೆ. ಅದೇ ಉಗ್ರವಾದಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.