ಸಿದ್ದರಾಮಯ್ಯ ಅಂದ್ರೆ ನಂಗಿಷ್ಟ, ಅವರು ಬಳಸ್ತಿದ್ದ ಕಾರು ನಂಗೇ ಬೇಕು : ಪಟ್ಟು ಹಿಡಿದ ಜಮೀರ್ ಅಹ್ಮದ್ !?

ಬೆಂಗಳೂರು : ನನಗೆ ಸಿದ್ದರಾಮಯ್ಯ ಎಂದರೆ ಬಹಳ ಇಷ್ಟ. ಅವರು ಬಳಸುತ್ತಿದ್ದ ಕಾರನ್ನು ನನಗೆ ಕೊಡಿ.  ಆ ಕಾರು ನನಗೆ ಬೇಕೇ ಬೇಕು ಎಂದು ಜಮೀರ್ ಅಹಮದ್‌ ಪಟ್ಟು ಹಿಡಿದಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಕುರಿತು ಜಮೀರ್ ಅಹಮದ್‌ ಡಿಪಿಎಆರ್‌ಗೆ ಪತ್ರ ಬರೆದಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಫಾರ್ಚೂನರ್ ಕಾರನ್ನು ನನಗೆ ನೀಡಿ. ನನಗೆ ಅವರೆಂದರೆ ಇಷ್ಟ. ಅದಕ್ಕೆ ಅವರು ಬಳಸುತ್ತಿದ್ದ ಕಾರೇ ನನಗೆ ಬೇಕು ಎಂದಿದ್ದಾರಂತೆ.

ಆದರೆ ಜಮೀರ್ ಅಹಮದ್ ಬೇಡಿಕೆಯನ್ನು ಕುಮಾರಸ್ವಾಮಿ ತಳ್ಳಿ ಹಾಕಿದ್ದು, ಆ ಕಾರನ್ನು ಹಿರಿಯ ಮಂತ್ರಿಗಳಿಗೆ ಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಜಮೀರ್ ಮಾತ್ರ ತನಗೇ ಆ ಕಾರು ಬೇಕು ಎಂದು ಪಟ್ಟು ಹಿಡಿದಿದ್ದು, ಈಗ ಮತ್ತೊಂದು ಗೊಂದಲ ಪ್ರಾರಂಭವಾಗಿದೆ.

 

Leave a Reply

Your email address will not be published.