ಅಸ್ಸಾಂ : ATM ಯಂತ್ರದಲ್ಲಿ ಇಲಿರಾಯನ ಅವಾಂತರ : 12 ಲಕ್ಷ ಮೌಲ್ಯದ ನೋಟು ಹಾಳು..!

ಎಟಿಎಮ್ ಯಂತ್ರದೊಳಗೆ ಸೇರಿಕೊಂಡ ಇಲಿಗಳು 12 ಲಕ್ಷ ರೂಪಾಯಿ ಬೆಲೆಯ ನೋಟುಗಳನ್ನು ಕತ್ತರಿಸಿ ಹಾಳು ಮಾಡಿರುವ ಘಟನೆ ವರದಿಯಾಗಿದೆ. ಅಸ್ಸಾಂ ರಾಜ್ಯದ ಟಿನ್ಸುಕಿಯಾ ಜಿಲ್ಲೆಯ SBI ಬ್ಯಾಂಕಿನ ಎಟಿಎಮ್ ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಇಲಿಗಳ ಹಾವಳಿಗೆ ತುತ್ತಾಗಿವೆ.

Image result for tinsukia atm

ಈ ಎಟಿಎಮ್ ಯಂತ್ರದಲ್ಲಿ ಕಳೆದ ತಿಂಗಳು ಉಂಟಾಗಿದ್ದ ಯಾಂತ್ರಿಕ ತೊಂದರೆಯಿಂದಾಗಿ ಮೇ 20 ದಿಂದ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿತ್ತು. ಜೂನ್ 11ರಂದು ಎಟಿಎಮ್ ಯಂತ್ರವನ್ನು ರಿಪೇರಿ ಮಾಡಲು ತಂತ್ರಜ್ಞರ ತಂಡದವರು ಬಂದಿದ್ದಾರೆ. ಎಟಿಎಮ್ ಮಷಿನ್ ಅನ್ನು ತೆರೆದು ನೋಡಿದಾಗ 500 ಹಾಗೂ 2000 ರೂಪಾಯಿಯ ನೋಟುಗಳು ಹರಿದು ಚಿಂದಿಯಾಗಿ ಬಿದ್ದಿರುವುದು ತಿಳಿದು ಬಂದಿದೆ.

Image result for tinsukia atm

12 ಲಕ್ಷದ 38 ಸಾವಿರ ರೂಪಾಯಿ ಮೌಲ್ಯದ ನೋಟುಗಳ ಇಲಿಗಳ ಬಾಯಿಗೆ ಸಿಲುಕಿ ನಷ್ಟವಾಗಿವೆ. ಹಾಳಾಗದೇ ಉಳಿದಿದ್ದ 17 ಲಕ್ಷ 10 ಸಾವಿರ ಮೌಲ್ಯದ ನೋಟುಗಳನ್ನು ಹೊರತೆಗೆಯಲಾಗಿದೆ.

 

3 thoughts on “ಅಸ್ಸಾಂ : ATM ಯಂತ್ರದಲ್ಲಿ ಇಲಿರಾಯನ ಅವಾಂತರ : 12 ಲಕ್ಷ ಮೌಲ್ಯದ ನೋಟು ಹಾಳು..!

Leave a Reply

Your email address will not be published.