ಚಿಕ್ಕಮಗಳೂರಿನಲ್ಲಿ ಕಲುಷಿತ ನೀರು ಸೇವನೆ : 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಿಕ್ಕಮಗಳೂರು : ನೀರಿಲ್ಲದೇ ಜನರು ಪರದಾಡುತ್ತಿದ್ದರೆ,ಇಲ್ಲೋಂದು ಕಡೆ  ಕಲುಷಿತ ನೀರು ಸೇವನೆಯಿಂದ 60ಕ್ಕೂ ಹೆಚ್ಚು ಜನರು ಅಸ್ವಸ್ತಗೊಂಡಿದ್ದಾರೆ.ಹೌದು ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಜನರು ಕಲುಷಿತ ನೀರು ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಕರಕುಚ್ಚಿ ಗ್ರಾಮದ ತಾಂಡಾ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ವಾಂತಿ ಬೇದಿಯಿಂದ ಬಳಲುತ್ತಿದ್ದು, ಸುಮಾರು 70 ಮಂದಿ ತರಿಕೇರೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ  ಹಾಗೂ ಲಕ್ಕವಳ್ಳಿ  ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದೊಂದು ವಾರದ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ನಿಂದ ಪೂರೈಸಿದ್ದ ನೀರನ್ನ ಕುಡಿದು ಜನರು ಅಸ್ವಸ್ತವಾಗಿರುವುದು ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com