‘Father’s Day’ ಯಂದು ಭಾವುಕರಾದ ವಿರಾಟ್ : ಕೊಹ್ಲಿ ‘ಥ್ಯಾಂಕ್ಯೂ ಡ್ಯಾಡ್’ ಅಂದಿದ್ದೇಕೆ..?

ಜೂನ್ 17ರಂದು ವಿಶ್ವದಾದ್ಯಂತ ‘ಅಪ್ಪಂದಿನ ದಿನ’ ವನ್ನಾಗಿ ಆಚರಿಸಲಾಗುತ್ತದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಫಾದರ್ಸ್ ಡೇ’ ಹಿನ್ನೆಲೆಯಲ್ಲಿ ತಮ್ಮ ತಂದೆ ಪ್ರೇಮ್ ಕೊಹ್ಲಿ, ತಮಗೆ ಕಲಿಸಿದ ಜೀವನದ ಶ್ರೇಷ್ಟ ಪಾಠದ ಕುರಿತು ಟ್ವೀಟ್ ಮಾಡಿದ್ದಾರೆ.

Image result for virat kohli father

ವಿರಾಟ್ ಕೊಹ್ಲಿ ಇನ್ನೂ 18 ವರ್ಷದವರಿದ್ದಾಗಲೇ, 2006 ಡಿಸೆಂಬರ್ 16ರಂದು ತಂದೆ ಪ್ರೇಮ್ ಕೊಹ್ಲಿ ತೀರಿಕೊಂಡಿದ್ದರು. ದೆಹಲಿ ತಂಡದ ಪರವಾಗಿ ರಣಜಿ ಪಂದ್ಯವನ್ನಾಡುತ್ತಿರುವಾಗಲೇ ಕೊಹ್ಲಿಗೆ ತಂದೆಯ ಮರಣದ ಸುದ್ದಿ ತಿಳಿಯಿತು. ತಂದೆಯನ್ನು ಕಳೆದುಕೊಂಡಿದ್ದರ ದುಃಖದ ನಡುವೆಯೂ, ಎದೆಗುಂದದೆ ಆಡಿದ ಕೊಹ್ಲಿ 90 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.

‘ ಆರಂಭದಿಂದಲೇ ಅವರು ನನಗೆ ಕಠಿಣ ಪರಿಶ್ರಮ ಪಡುವುದನ್ನು ಕಲಿಸಿ ಕೊಟ್ಟಿದ್ದರು. ಬೇರೆಯವರ ಹತ್ತಿರ ಸಹಾಯವನ್ನು ನಿರೀಕ್ಷಿಸದೆ, ಸ್ವಂತ ಪರಿಶ್ರಮದ ಮೇಲೆ ಅಚಲವಾದ ನಂಬಿಕೆಯಿಡುವುದನ್ನು ಕಲಿಸಿದ್ದರು. ಆ ಪಾಠವೇ ಇಂದು ನನ್ನ ಜೀವನದ ಸತ್ವವಾಗಿದೆ.  ಅವರು ನನ್ನನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದಾರೆ, ಥ್ಯಾಂಕ್ಯೂ ಡ್ಯಾಡ್ ‘ ಎಂದು ವಿರಾಟ್ ಬರೆದುಕೊಂಢಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com