ಮಹಿಳೆಯ ಎದೆಗೆ ಒದ್ದ ಜನಪ್ರತಿನಿಧಿ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗ್ತಿದೆ ವಿಡಿಯೋ

ಹೈದರಾಬಾದ್ : ಜನತಾಪ್ರತಿನಿಧಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯ ಎದೆಗೆ ಒದ್ದ ಘಟನೆ ಹೈದರಾಬಾದ್‌ನ  ನಿಜಾಮ್‌ಬಾದ್‌ ಜಿಲ್ಲೆಯಲ್ಲಿ ನಡೆದಿದೆ.

ಧರಪಳ್ಳಿ ಮಂಡಲದ ಅಧ್ಯಕ್ಷ ಇಮ್ಮಡಿ ಗೋಪಿ ಎಂಬಾತ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಎದೆಗೆ ಒದ್ದು ಅಪಮಾನ ಮಾಡಿದ್ದು, ಮಹಿಳೆ ಆರೋಪಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು 10 ತಿಂಗಳ ಹಿಂದೆ ಗೋಪಿಯಿಂದ 33ಲಕ್ಷ ರೂ ಮೌಲ್ಯದ ಜಮೀನನ್ನು ಖರೀದಿಸಿದ್ದರು. ಆದರೆ ಭೂಮಿಯನ್ನು ಮಹಿಳೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಗೋಪಿ ವಿಳಂಬ ಮಾಡಿದ್ದನು. ಈ ಭಾಗದಲ್ಲಿ ಜಮೀನಿನ ಬೆಲೆ ಹೆಚ್ಚಿದ್ದು, ಬಳಿಕ ಹೆಚ್ಚುವರಿಯಾಗಿ 50ಲಕ್ಷ ರೂಪಾಯಿ ನೀಡುವಂತೆ ಮಹಿಳೆಗೆ ಒತ್ತಡ ಹೇರಿದ್ದನು.

ಮಹಿಳೆಯ ಕುಟುಂಬಸ್ಥರು ಗೋಪಿಯವರ ಮನೆಗೆ ಹೋಗಿ ತಮ್ಮ ಭೂಮಿಯನ್ನು ತಮಗೆ ಹಸ್ತಾಂತರಿಸುವಂತೆ ಬೇಡಿಕೆ ಇಟ್ಟಿದ್ದು, ಈ ವೇಳೆ ಗೋಪಿಯೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಮಹಿಳೆಯ ಮಾತಿಗೆ ಸಿಟ್ಟಿಗೆದ್ದ ಗೋಪಿ ಮಹಿಳೆಯ ಎದೆಗೆ ಒದ್ದು ಅವಮಾನ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com