WATCH : ಹೆಬ್ಬಾವಿನ ಜೊತೆ ಸೆಲ್ಫೀ ಕ್ಲಿಕ್ಕಿಸಲು ಹೋಗಿ ತೊಂದರೆಗೆ ಸಿಲುಕಿದ ಫಾರೆಸ್ಟ್ ಆಫೀಸರ್ : ವಿಡಿಯೋ ವೈರಲ್

ಅರಣ್ಯಾಧಿಕಾರಿಯೊಬ್ಬ ಹೆಬ್ಬಾವಿನ ಜೊತೆ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಪ್ರಾಣಾಂತಿಕ ತೊಂದರೆಗೆ ಸಿಲುಕಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 30 ಅಡಿ ಹೆಬ್ಬಾವೊಂದು ಅರಣ್ಯಾಧಿಕಾರಿಯ ಕೊರಳಿಗೆ ಸುತ್ತಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಈ ದೈತ್ಯ ಗಾತ್ರದ ಹೆಬ್ಬಾವು ಗ್ರಾಮದ ಆಡೊಂದನ್ನು ತಿಂದು ತೇಗಿತ್ತು. ಇದರಿಂದಾಗಿ ಸ್ಥಳೀಯರು ಈ ಭಯಾನಕ ಹೆಬ್ಬಾವನ್ನು ಹಿಡಿಯಲು ಅರಣ್ಯಾಧಿಕಾರಿಗೆ ತಿಳಿಸಿದ್ದರು.

ಸಿಬ್ಬಂದಿಯೊಂದಿಗೆ ಬಂದ ಅರಣ್ಯಾಧಿಕಾರಿ ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಧಿಕಾರಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ಗ್ರಾಮಸ್ಥರೊಂದಿಗೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕೊರಳಿಗೆ ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು ಆತಂಕಕ್ಕೆ ಕಾರಣವಾಗಿದೆ. ಜೊತೆಗಿದ್ದ ಸಿಬ್ಬಂದಿಯ ಸಹಾಯದಿಂದ ಹೆಬ್ಬಾವಿನ ಹಿಡಿತದಿಂದ ಬಿಡಿಸಿಕೊಂಡು ಅಧಿಕಾರಿ ಪಾರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com