‘ಭೈರವ’ನ ರೂಪ ತಾಳಿದ ಧನಂಜಯ್ : ಫಸ್ಟ್‌ಲುಕ್‌ನಲ್ಲೇ ರಗಡ್‌ ಆಗಿ ಕಾಣಿಸಿಕೊಂಡ ಟಗರು ಡಾಲಿ

ಇತ್ತೀಚೆಗಷ್ಟೇ ಟಗರು ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ಮಾನ್ವಿತಾ ಅಭಿನಯಕ್ಕೆ ಫಿದಾ ಆಗಿದ್ದ ರಾಂ ಗೋಪಾಲ್‌ ವರ್ಮಾ ಈಗ ಡಾಲಿ ಧನಂಜಯ್‌ಗೆ ತಮ್ಮ ಸಿನಿಮಾದಲ್ಲಿ ಆಫರ್ ನೀಡಿದ್ದಾರೆ.

ಹೌದು ಸ್ಯಾಂಡಲ್‌ವುಡ್‌ನಲ್ಲಿ ಟಗರು ಸಿನಿಮಾದಲ್ಲಿ ತಮ್ಮ ನಟನೆ ಮೂಲಕ ಕನ್ನಡಿಗರ ಮನಗೆದ್ದಿದ್ದ ಡಾಲಿ ಧನಂಜಯ್‌ ಮೊದಲ ಬಾರಿಗೆ ತೆಲುಗಿನಲ್ಲಿ ಭೈರವ ಗೀತಾ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಧನಂಜಯ್‌ ರಾಂ ಗೋಪಾಲ್‌ ವರ್ಮಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿನಿಮಾದಲ್ಲಿ ಧನಂಜಯ್‌ ಪಾತ್ರದ ಲುಕ್‌ ರಿವೀಲ್ ಆಗಿದೆ.

ರಗಡ್ ಲುಕ್‌ನಲ್ಲಿ ಧನಂಜಯ್ ಕಾಣಿಸಿಕೊಂಡಿದ್ದು, ಕೈಯಲ್ಲಿ ಕೊಡಲಿ ಹಿಡಿದಿರುವ ಫೋಟೋಗಳನ್ನು ರಾಂಗೋಪಾಲ್‌ ವರ್ಮಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾಸ್ಕರ್‌ ರಿಷಿ ಹಾಗೂ ರಾಂಗೋಪಾಲ್ ವರ್ಮಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ತೆಲುಗು, ಕನ್ನಡ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಫಸ್ಟ್‌ ಲುಕ್‌ ಸಹ ಸದ್ಯದಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com