ನಾನು ಸಚಿವನಾಗಲು ಮಾಜಿ ಸಿ.ಎಂ ಸಿದ್ದರಾಮಯ್ಯ ಕಾರಣ : ಸಿ. ಪುಟ್ಟರಂಗ ಶೆಟ್ಟಿ

 

‘ ನಾನು ಸಚಿವನಾಗಲು ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ಕಾರಣ ‘ ಎಂದು ಚಾಮರಾಜನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಹೇಳಿಕೆ ನೀಡಿದ್ದಾರೆ. ‘ ಹಿಂದುಳಿದ ವರ್ಗದ ಏಕೈಕ ಶಾಸಕನಾಗಿದ್ದ ನನಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡಿರೊದು ಸಂತಸವಾಗಿದೆ ‘ ಎಂದು ಹೇಳಿದ್ದಾರೆ.

 

‘ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ, ಆದರೆ ಸಿದ್ದರಾಮಯ್ಯ ಅವರೇ ನನಗೆ ಈಗಲೂ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವ್ರು ಯಾವಾ ಗಲೂ ಈ ಭಾಗದ ಮುಖ್ಯ ಮಂತ್ರಿ, ಚಾಮರಾಜನಗರ ಶಾಸಕರಾದವರಿಗೆ ಸಚಿವ ಸ್ಥಾನ ನೀಡಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರು ಸಚಿವ ಸ್ಥಾನಕೊಡಿಸುವ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ದೂರ ಮಾಡಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com