ಅನಾಗರಿಕನಿಗೆ ಪಾಠ ಮಾಡಿದ ಪತ್ನಿ ಅನುಷ್ಕಾ : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಪತಿ ಕೊಹ್ಲಿ

ಮುಂಬೈ: ಐಷಾರಾಮಿ ಕಾರಿನಲ್ಲಿ ಹೋಗುತ್ತ ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡ ವಿಡಿಯೊ ಈಗ ವೈರಲ್‌ ಆಗಿದೆ.

ಕಸ ಬಿಸಾಡುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಕುಳಿತ್ತಿದ್ದ ಅನುಷ್ಕಾ ಗಮನಿಸಿ  ತಮ್ಮ ಕಾರಿನ ಗಾಜು ಇಳಿಸಿ, ‘ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದರು. ‘ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ’  ಸ್ವಚ್ಛತೆಯನ್ನು ಕಾಪಾಡಿ ಎಂದು ಬುದ್ಧಿ ಹೇಳಿದ್ದರು.

ವ್ಯಕ್ತಿಗೆ ಸ್ವಚ್ಛತಾ ಪಾಠವನ್ನು ಹೇಳುವ ಸನ್ನಿವೇಶವನ್ನು ಅನುಷ್ಕಾರ ಪತಿ, ಕ್ರಿಕೆಟ್‌ ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ವಿಡಿಯೊ ಮಾಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ರಸ್ತೆಯಲ್ಲಿ ಈ ರೀತಿ ಕಸ ಹಾಕುವ ಜನರನ್ನು ಸರಿದಾರಿಗೆ ತರಬೇಕಿದೆ. ಐಷಾರಾಮಿ ಕಾರಿನಲ್ಲಿ ಹೋಗುತ್ತಿದ್ದರೂ ಸ್ವಚ್ಛತೆ ಬಗ್ಗೆ ತಲೆಯಲ್ಲಿ ತಿಳಿವಳಿಕೆ ಇಲ್ಲ. ಇಂತಹ ಸನ್ನಿವೇಶಗಳನ್ನು ನೀವೂ ಕಂಡರೇ, ಜನರನ್ನು ಎಚ್ಚರಿಸಿ ಸ್ವಚ್ಛತೆಯ ಅರಿವು ಮೂಡಿಸಿ’ ಎಂದು ವಿರಾಟ್‌ ತಮ್ಮ ಟ್ವಿಟರ್ ನಲ್ಲಿ ಸಲಹೆ ನೀಡಿದ್ದಾರೆ.

Leave a Reply

Your email address will not be published.