WATCH : ತಂತಿ ಬೇಲಿಯಲ್ಲಿ ಸಿಲುಕಿದ್ದ ಕಾಳಿಂಗನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಸ್ನೇಕ್ ಜಾಯ್‌

ಮಂಗಳೂರು : ತಂತಿ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸಂಗತಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.

ಸವಣಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯ ತೋಟದ ಆವರಣಕ್ಕೆ ಹಾಕಿದ್ದ ಕಬ್ಬಿಣದ ಬೇಲಿಯಲ್ಲಿ ಕಾಳಿಂಗ ಸಿಕ್ಕಿಕೊಂಡಿತ್ತು. ವಿಷಯ ತಿಳಿದ ಸ್ಥಳೀಯರು ಉಜಿರೆಯ ಹಾವು ಹಿಡಿಯುವ ಸ್ನೇಕ್ ಜಾಯ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ಬುಸುಗುಟ್ಟುತ್ತಿದ್ದ 13 ಅಡಿ ಉದ್ದದ ಹಾವನ್ನು ಬೇಲಿಯಿಂದ ಹೊರತೆಗೆದಿದ್ದು, ಬಳಿಕ  ಹಾವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ವಿಷ ಉಗುಳುವ ಕಾಳಿಂಗನ ರಕ್ಷಣೆಯನ್ನು ನೋಡಲು ಸ್ಥಳೀಯರು ಭಯ, ಆತಂಕದಲ್ಲಿಯೇ ಸ್ಥಳದಲ್ಲಿ ನೆರೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com