ನಾಗಾಭರಣ ನಿರ್ದೇಶನದಲ್ಲಿ ಸಿನಿಮಾವಾಗುತ್ತಿದೆ ತೇಜಸ್ವಿಯವರ ಜುಗಾರಿ ಕ್ರಾಸ್‌ !

ಬೆಂಗಳೂರು :ಕನ್ನಡದ ಅನೇಕ ಕಾದಂಬರಿಗಳು ಸಿನಿಮಾವಾಗಿ ತೆರೆಗೆ ಬಂದಿವೆ. ಹಾಗೆಯೇ ಕನ್ನಡದ ಮತ್ತೊಂದು ಪ್ರಸಿದ್ಧ ಕಾದಂಬರಿಯಾದ ‘ಜುಗಾರಿ ಕ್ರಾಸ್’ ಸಹ ಸಿನಿಮಾವಾಗುತ್ತಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ  ಜುಗಾರಿ ಕ್ರಾಸ್ ಈಗಾಗಲೇ  ನಾಟಕ ರೂಪದಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿದ್ದು, ಇದೀಗ ಸಿನಿಮಾವಾಗುತ್ತಿದೆ.

ಹೌದು. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಮೇಲೆ ಇದು ಬೆಳಕು ಚೆಲ್ಲುತ್ತದೆ. ಕಾಡು ಕಾಳದಂಧೆಗೆ ಸಿಲುಕಿ ನಲುಗುತ್ತಿರುವ ಬಗ್ಗೆ ಈ ಕಾದಂಬರಿಯಲ್ಲಿ ಹೇಳಲಾಗಿದೆ.  ‘ಜುಗಾರಿ ಕ್ರಾಸ್’ನಲ್ಲಿ ನಡೆಯುವ ಕಾಳದಂಧೆ ಊಹೆಗೆ ನಿಲುಕದ್ದು. ಈ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತರಲು ಈ ಹಿಂದೆ ಪ್ರಯತ್ನ ಮಾಡಲಾಗಿತ್ತು. ನಾಗಾಭರಣ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ.

“ಜುಗಾರಿ ಕ್ರಾಸ್’ ಕಾದಂಬರಿಯನ್ನು ಚಿತ್ರ ಮಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ಈಗ ಆ ಕಾದಂಬರಿಯ ಹಕ್ಕುಗಳನ್ನು ಪಡೆದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com