FIFA 2018 : ಜರ್ಮನಿಗೆ ಶಾಕ್ ನೀಡಿದ ಮೆಕ್ಸಿಕೊ : ಬ್ರೆಜಿಲ್-ಸ್ವಿಟ್ಜರ್ಲೆಂಡ್ ಪಂದ್ಯ ಡ್ರಾ

ಕಳೆದ ಬಾರಿಯ ವಿಶ್ವಚಾಂಪಿಯನ್ ಜರ್ಮನಿಗೆ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ಸೋಲಿನ ಅಘಾತ ನೀಡಿದೆ. ಭಾನುವಾರ ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್-2018 ಟೂರ್ನಿಯ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೊ 1-0 ಗೆಲುವು ಸಾಧಿಸಿದೆ. ಪಂದ್ಯದ ಮೊದಲರ್ಧದ 35ನೇ ನಿಮಿಷದಲ್ಲಿ ಹಿರ್ವಿಂಗ್ ಲೊಜಾನೊ ಮೆಕ್ಸಿಕೊ ಪರವಾಗಿ ಗೋಲ್ ಬಾರಿಸಿದರು.

ರೊಸ್ಟೊವ್ ಅರೆನಾದಲ್ಲಿ ರವಿವಾರ ನಡೆದ ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳ ನಡುವಿನ ‘ಇ’ ಗುಂಪಿನ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲರ್ಧದ 20ನೇ ನಿಮಿಷದಲ್ಲಿ ಬ್ರೆಜಿಲ್ ಪರವಾಗಿ ಫಿಲಿಪ್ ಕೌಟಿನ್ಹೊ ಗೋಲ್ ದಾಖಲಿಸಿ ಮುನ್ನಡೆ ಒದಗಿಸಿದರು. 50ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್ ಪರವಾಗಿ ಸ್ಟೀವನ್ ಜುಬೇರ್ ಗೋಲ್ ಬಾರಿಸಿದ ನಂತರ, ಸ್ಕೋರ್ 1-1 ರಿಂದ ಸಮವಾಯಿತು.

Image result for brazil switzerland coutinho

ಭಾನುವಾರ ಸಮಾರಾ ಅರೆನಾ ಕ್ರೀಡಾಂಗಣದಲ್ಲಿ ನಡೆದ ‘ಇ’ ಗುಂಪಿನ ಲೀಗ್ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಸರ್ಬಿಯಾ 1-0 ಗೋಲ್ ಅಂತರದ ಜಯ ಸಾಧಿಸಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com