ಸಮಾಜದಲ್ಲಿ ಮತ್ತೊಂದು ಗೌರಿ ಹತ್ಯೆಯಾಗದಂತೆ ನೋಡಿಕೊಳ್ಳಬೇಕು : ಪ್ರಕಾಶ್ ರೈ

ಚಿಕ್ಕಬಳ್ಳಾಪುರದಲ್ಲಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ. ಗೌರೀಬಿದನೂರು ನಂಜಯ್ಯಗಾರಿಪಲ್ಲಿಯಲ್ಲಿ ಮಾತನಾಡಿರುವ ನಟ ಪ್ರಕಾಶ್ ರೈ ಗೌರಿ ಲಂಕೇಶ್ ಹಂತಕರ ಪತ್ತೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ನೋವಿನ ವಿಚಾರ ಗಂಭೀರವಾಗಿ ಚರ್ಚಿಸುವಂತಹ ವಿಷಯ. ಇಷ್ಟು ದಿನ SIT ಹಂತಕರನ್ನ ಹಿಡೀತಿಲ್ಲ ಅಂತ ಹೇಳುತ್ತಿದ್ದೀವಿ. ಆದ್ರೆ SIT ಈಗ ಹಿಡಿತಿದ್ದಾರೆ ಕೊನೆ ಹಂತಕ್ಕೆ ತನಿಖೆ ಬಂದಿದೆ. ಇಷ್ಟು ದಿನ ತಡೆದಿದ್ದೀವಿ ಇನ್ನೂ ನಾಲ್ಕು ದಿನ ಕಾಯೋಣ. ಹಂತಕರ ಯಾರು ಅಂತ ಅಧಿಕೃತವಾದ ಮೇಲೆ ಮಾತಾಡೋಣ. ಸುಖಾ ಸುಮ್ಮನೆ ಯಾರ್ಯಾರೋ ಮೇಲೊ ಹೇಳೋದು ಬೇಡ, ತನಿಖೆ ಮುಗಿದು ಬಂದ ನಂತರ ಯಾರು ಅಂತ ಗೊತ್ತಾದ ಮೇಲೆ ಮಾತಾಡೋಣ. ಸಮಾಜದಲ್ಲಿ ಮತ್ತೊಂದು ಗೌರಿ ಹತ್ಯೆಯಾಗದಂತೆ ನಡೆದುಕೊಳ್ಳಬೇಕು ‘ ಎಂದಿದ್ದಾರೆ.

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಹಿನ್ನಲೆ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಿಪಲ್ಲಿ ಸರ್ಕಾರಿ ಶಾಲೆಗೆ ಪ್ರಕಾಶ್ ರೈ ಆಗಮಿಸಿದ್ದರು.

Leave a Reply

Your email address will not be published.