ಪ್ರಧಾನಿ ಮೋದಿ ಭೇಟಿಯಾದ ಕುಮಾರಸ್ವಾಮಿ : ಕಾವೇರಿ ಪ್ರಧಿಕಾರ ರಚನೆ, ಸಾಲಮನ್ನಾ ಕುರಿತು ಚರ್ಚೆ

ದೆಹಲಿ : ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಹೊಂದಿ, ರಾಜ್ಯಕ್ಕೆ ಬೇಕಾದ ಸಹಾಯ ಪಡೆಯುವ ಕೆಲಸವನ್ನು ಸಿಎಂ ಕುಮಾರಸ್ವಾಮಿ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.

ದೆಹಲಿಯ ಪ್ರಧಾನಿಗಳ ನಿವಾಸದಲ್ಲಿ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಎಚ್‌ಡಿಕೆ, ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದು, ಮುಖ್ಯವಾಗಿ ಕಾವೇರಿ ನೀರು ಪ್ರಾಧಿಕಾರ ರಚನೆ ಕುರಿತಂತೆ ರಾಜ್ಯ ಸರ್ಕಾರದ ಆಕ್ಷೇಪ ಹಾಗೂ ಸಾಲಮನ್ನಾ ಮಾಡುವ ವಿಚಾರ ಸಂಬಂಧ ಕೇಂದ್ರ ಸರ್ಕಾರ ಶೇ.50ರಷ್ಟು ಸಹಾಯ ಮಾಡುವ ಕುರಿತಪ ಚರ್ಚೆ  ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಸಹ ನೀತಿ ಆಯೋಗದ ಸಭೆಯಲ್ಲಿ ಕುಮಾರಸ್ವಾಮಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಸಾಲಮನ್ನಾ ವಿಚಾರವಾಗಿ ಮಾತುಕತೆ ನಡೆಸಿದ್ದರು. ಇಂದೂ ಸಹ ಸಾಲಮನ್ನಾ  ವಿಚಾರವಾಗಿ ಮಾತುಕತೆ ನಡೆಸಿದ್ದು, ರಾಜ್ಯದ ರೈತರ ಸಾಲಮನ್ನಾ ಮಾಡುವ ಸಲುವಾಗಿ ಕುಮಾರಸ್ವಾಮಿ ಕಸರತ್ತು ನಡೆಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com