ಕದನ ವಿರಾಮದ ಬಳಿಕ ಮತ್ತೆ ಶುರುವಾಯ್ತು ಉಗ್ರರ ಬೇಟೆ : ಭಯೋತ್ಪಾದಕರ ಸದೆಬಡೆಯಲು ಸಜ್ಜಾದ ಸೇನೆ

ದೆಹಲಿ :  ಮುಸ್ಲಿಮರ ಪವಿತ್ರ ತಿಂಗಳು ರಮ್ಜಾನ್‌ ಆರಂಭದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಘೋಷಿಸಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ‍ಪುನರಾರಂಭಿಸಿವೆ.

ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಉಗ್ರರು ಶ್ರೀನಗರದಲ್ಲಿ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣ ಸೃ‌ಷ್ಟಿಸಲು ಕೇಂದ್ರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಪ್ರಚೋದನೆ ಉಂಟಾದರೂ ಭದ್ರತಾ ಪಡೆಗಳು ಸಂಯಮ ಪಾಲಿಸಿದ್ದರಿಂದ ಮುಸ್ಲೀಮರು ಶಾಂತಿಯುತವಾಗಿ ರಂಜಾನ್ ಆಚರಿಸಲು ಸಾಧ್ಯವಾಗಿದೆ ಹಾಗೂ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ಅಕ್ಷರಶಃ ಪಾಲಿಸಿದ ಭದ್ರತಾ ಪಡೆಯನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.

ಉಗ್ರರು ನಡೆಸುವ ದಾಳಿ ತಡೆಯಲು ಮತ್ತು ಹಿಂಸೆ ಹಾಗೂ ಹತ್ಯೆ ನಿಲ್ಲಿಸಲು ಈ ಹಿಂದಿನಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ವರ್ಷ 55  ಉಗ್ರರು ಹತ್ಯೆಯಾಗಿದ್ದು, ಕಳೆದ ನಾಲ್ಕು ತಿಂಗಳಿಂದ 80 ಹಿಂಸಾತ್ಮಕ ಘಟನೆಗಳು ನಡೆದಿದೆ ಎಂದು ವರದಿ ತಿಳಿಸಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com