ರಾಜ್ಯದ ರೈತರ ಸಾಲಮನ್ನಾ ಮಾಡಲು ಕೇಂದ್ರ ಸಹಾಯ ಮಾಡಲ್ಲ : ಸತ್ಯ ಬಾಯ್ಬಿಟ್ಟ ಯಡಿಯೂರಪ್ಪ ?

ಬೆಂಗಳೂರು : ಎಚ್‌ಡಿಕೆ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತ ಬಂದರೂ ಇನ್ನೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗುತ್ತ ಬಂತು. ಆದರೆ ಕೊಟ್ಟ ಒಂದೂ ಭರವಸೆ ಈಡೇರಿಲ್ಲ. ಏನಾದರು ಕೇಳಿದರೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಬೇಕು ಎನ್ನುತ್ತಾರೆ. ಇದನ್ನೆಲ್ಲ ಮೈತ್ರಿಗೂ ಮುನ್ನ ಯೋಚಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ.

ಎಲ್ಲಕ್ಕೂ ಮುನ್ನ ಕುಮಾರಸ್ವಾಮಿ ರೈತರ ಭರವಸೆ ಈಡೇರಿಸಬೇಕು. ಸಾಲಮನ್ನಾಗಾಗಿ ರೈತರು ಕಾಯುತ್ತಿದ್ದಾರೆ. ಎಲ್ಲವನ್ನೂ ನಾನು ಮೌನವಾಗಿ ಗಮನಿಸುತ್ತಿದ್ದೇನೆ. ಬಜೆಟ್ ಮಂಡನೆ ಆಗೋವರೆಗೂ ಸುಮ್ಮನಿರುತ್ತೇನೆ ಅಷ್ಟೇ. ಆಮೇಲೂ ಭರವಸೆ ಈಡೇರದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇವೆಲ್ಲದಕ್ಕಿಂತ ಮುಖ್ಯವಾಗಿ ರೈತರ  ರೈತರ ಸಾಲ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ ಎಂಬ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಅಲ್ಲಿ ಕೇಂದ್ರ ಸರ್ಕಾರ ಒಂದು ನಯಾಪೈಸೆ ನೆರವು ನೀಡಿಲ್ಲ. ಹಾಗಾಗಿ ಕುಮಾರಸ್ವಾಮಿ ತಮ್ಮ ಆರ್ಥಿಕ ಇತಿಮಿತಿ ಅರಿತು ರೈತರ ಸಾಲ ಮನ್ನಾ ಘೋಷಣೆ ಮಾಡಬೇಕಿತ್ತು. ಈಗಲೂ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವವರೆಗೆ ನಾವು ಕಾಯುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com