ಮೈತ್ರಿ ಸರ್ಕಾರಕ್ಕೆ ಮದುವೆಯಾಗಿ ಮಹೂರ್ತ ಫಿಕ್ಸ್ ಆಗಿದೆ, ಹುಮ್ಮಸ್ಸಲ್ಲಿದ್ದಾರೆ ಬಜೆಟ್ ಮಂಡಿಸಲಿ ಬಿಡಿ : ಇಬ್ರಾಹಿಂ

ಬೆಂಗಳೂರು : ಬಜೆಟ್ ಮಂಡನೆ ವಿಚಾರದಲ್ಲಿ ಉಂಟಾದ ಗೊಂದಲ ಸಂಬಂಧ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಸಿಎಂ ಬಜೆಟ್ ಮಂಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಬಜೆಟ್ ಮಂಡಿಸುವುದಾದರೆ ಮಂಡಿಸಲಿ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಮದುವೆ ಆಗಿ ಮುಹೂರ್ತ ಫಿಕ್ಸ್ ಆಗಿದೆ. ಮುಖ್ಯಮಂತ್ರಿಯವರು ಕೂಡ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ಬಜೆಟ್ ಮಂಡನೆ ವಿಚಾರದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ಬಜೆಟ್ ಮಂಡಿಸಿದರೆ ಮಂಡಿಸಲಿ ಎಂದಿದ್ದಾರೆ.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‍ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಹೇಳಿದ್ದು ಅಮಾಯಕ ಯುವಕರ ತಲೆ ಕೆಡಿಸಿದವರು ಯಾರು ಎಂದು? ಆರೋಪಿಗಳು ಈಗಾಗಲೇ ನಾಲ್ಕು ತಂಡಗಳಾಗಿ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಹತ್ಯೆಗೆ ಆರೋಪಿಗಳಿಗೆ ಪ್ರೇರೆಪಿಸಿದ್ದು ಯಾರು ಎಂದು ಪ್ರಮೋದ್ ಮುತಾಲಿಕ್ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಶ್ನಿಸಿದ್ದಾರೆ.

ನಮಗೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿಯವರ ಮೇಲೆಯೂ ಗೌರವವಿದೆ. ಮುತಾಲಿಕ್ ರವರದ್ದು ಆಚಾರವಿಲ್ಲದ ನಾಲಿಗೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.