ಬಜೆಟ್ ಗೊಂದಲ ನಿವಾರಣೆಗೆ ಡಿಕೆಶಿ ಎಂಟ್ರಿ : ಈ ಬಾರಿ ಸಮಸ್ಯೆ ಬಗೆಹರಿಸ್ತಾರಾ ಟ್ರಬಲ್ ಶೂಟರ್?

ಬೆಂಗಳೂರು : ದೋಸ್ತಿ ಸರ್ಕಾರದಲ್ಲಿ ಈಗ ಮಾಜಿ ಸಿಎಂ ಸಿದ್ದರಾಮ್ಯ ತಲೆನೋವಾಗಿ ಪರಿಣಮಿಸಿದ್ದಾರೆ. ನಾನು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದೇನೆ. ಅದೇ ಮುಂದುವರಿಯಲಿ. ಹೊಸ ಸರ್ಕಾರದ ಯೋಜನೆಗಳೇನಾದರೂ ಇದ್ದರೆ ಅದಕ್ಕೆ ಬೇಕಾದರೆ ಪೂರಕ ಬಜೆಟ್ ಮಂಡಿಸಲಿ ಎಂದಿದ್ದು, ಈಗ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಎಲ್ಲಾ ವಿಚಾರವನ್ನು ನಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡೋಣ. ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದು ಬೇಡ ಎಂದಿದ್ದಾರೆ. ಇನ್ನು ಕಾಂಗ್ರೆಸ್‌ನ ಬಜೆಟ್‌ ಗೊಂದಲ ನಿವಾರಣೆಗೆ ಕಾಂಗ್ರೆಸ್‌ನ ಆಪತ್ಬಾಂಧವ ಡಿಕೆಶಿ ಎಂಟ್ರಿ ಕೊಟ್ಟಿದ್ದು, ಒಳ್ಳೆಯ ಯೋಜನೆಗಳನ್ನು, ಉತ್ತಮ, ಜನಪರ ಕೆಲಸಗಳನ್ನು ಮುದುವರಿಸಲೇ ಬೇಕು. ಬಜೆಟ್ ಅವಶ್ಯಕತೆ ಇದೆ ಎನಿಸಿದರೆ, ಪರಿಸ್ಥಿತಿಯನ್ನು ನೋಡಿಕೊಂಡು ಮಂಡಿಸಲಿ. ಅವಶ್ಯಕತೆ ಇಲ್ಲ ಎನ್ನಿಸಿದ್ದನ್ನು ಬಿಟ್ಟು ಬಿಡಲಿ ಎಂದಿದ್ದಾರೆ.

ಜೊತೆಗೆ ಒಬ್ಬೊಬ್ಬ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ  ಕೈ ನಾಯಕರಿಗೆ ಡಿಕೆಶಿ ಕಿವಿಮಾತು ಹೇಳಿದ್ದು, ಎಲ್ಲೆಂದರಲ್ಲಿ, ತಮಗಿಷ್ಟ ಬಂದಂತೆ ಹೇಳಿಕೆ ನೀಡಿಬೇಡಿ. ಯೋಚನೆ ಮಾಡಿ ಮಾತನಾಡಿ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಡಿಕೆಶಿ ಮಾತನ್ನು ಕೇಳುತ್ತಾರಾ. ಹೊಸ ಬಜೆಟ್ ಮಂಡನೆಯಾಗುತ್ತದಾ ?, ಮೈತ್ರಿ ಸರ್ಕಾರದಲ್ಲಿ ಗೊಂದಲ ಮತ್ತೆ ಮುಂದುವರಿಯುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

 

 

Leave a Reply

Your email address will not be published.